Saturday, August 8, 2026
spot_imgspot_img
spot_imgspot_img

ದೀಪಾವಳಿಗೆ ಭರ್ಜರಿ ಗಿಫ್ಟ್​ ಕೊಟ್ಟ ಕೇಂದ್ರ ಸರ್ಕಾರ..!

- Advertisement -
- Advertisement -

ನವದೆಹಲಿ: ದೀಪಾವಳಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್​ ಕೊಟ್ಟಿದ್ದು, ಪೆಟ್ರೋಲ್​ ಮೇಲೆ 5 ರೂಪಾಯಿ, ಡಿಸೇಲ್​ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ.

ಕೊನೆಗೂ ದೇಶದ ಜನತೆಯ ಆಕ್ರೋಶಕ್ಕೆ ಮಣಿದಂತೆ ಕಾಣುತ್ತಿರುವ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ತೈಲ ಬೆಲೆ 100 ರೂಪಾಯಿ ದಾಟಿದ್ದರೂ ಸರ್ಕಾರ ಏಕೆ ಸುಂಕ ಕಡಿತ ಮಾಡಿಲ್ಲ ಎಂದು ದೇಶದ ಜನತೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ವಿರೋಧ ಪಕ್ಷಗಳು ಕೂಡ ಬೆಲೆ ಏರಿಕೆಯನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡು ದೇಶದಾದ್ಯಂತ ನಿರಂತರ ಪ್ರತಿಭಟನೆಗಳನ್ನು ನಡೆಸಿದ್ದವು.

ಸದ್ಯ ಕೇಂದ್ರ ಸರ್ಕಾರ ಸುಂಕ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಕೂಡ ಸುಂಕ ಕಡಿಮೆ ಮಾಡಿ ಜನರಿಗೆ ಮತ್ತಷ್ಟು ರಿಲೀಫ್​ ನೀಡುತ್ತಾ ಎಂಬ ಕುತೂಹಲ ಮೂಡಿದೆ. ನೂತನ ದರ ಇಂದು ಮಧ್ಯ ರಾತ್ರಿಯಿಂದ ಜಾರಿ ಆಗಲಿದೆ.

- Advertisement -

Related news

error: Content is protected !!