Saturday, June 20, 2026
spot_imgspot_img
spot_imgspot_img

ದೇವರಿಗಾಗಿ ನಾಲಿಗೆ ಕತ್ತರಿಸಿಕೊಂಡ ಭಕ್ತನ ಸ್ಥಿತಿ ಗಂಭೀರ

- Advertisement -
- Advertisement -

ಭಕ್ತನೊಬ್ಬ ತನ್ನ ನಾಲಿಗೆಯನ್ನು ಕತ್ತರಿಸಿ ದೇವರಿಗೆ ಅರ್ಪಿಸಿದ ಘಟನೆ ಇಲ್ಲಿನ ಮಾ ಶೀಟ್ಲಾ ದೇವಸ್ಥಾನದಲ್ಲಿ ನಡೆದಿದೆ.

ಕೌಶಂಬಿ ನಿವಾಸಿ ಸಂಪತ್ (38) ನಾಲಿಗೆಯನ್ನು ಕತ್ತರಿಸಿಕೊಂಡಾತ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಸಂಪತ್ ಪತ್ನಿ ಬನ್ನೋ ದೇವಿ ಎಂಬಾಕೆ ದೇವಸ್ಥಾನಕ್ಕೆ ಬಂದು ಗಂಗಾ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿದ್ದರು. ಬಳಿಕ ದೇವಾಲಯದ ಪ್ರದಕ್ಷಿಣೆ ಪೂರ್ಣಗೊಳಿದ್ದಾರೆ.

ಪ್ರದಕ್ಷಿಣೆ ಪೂರ್ಣವಾಗುತ್ತಿದ್ದಂತೆ ಆತ ತನ್ನ ನಾಲಿಗೆಯನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾನೆ. ಕತ್ತರಿಸಿದ ನಾಲಿಗೆಯನ್ನು ದೇವಳದ ಬಾಗಿಲಿನ ಚೌಕಟ್ಟಿನಲ್ಲಿ ಇಟ್ಟಿದ್ದಾನೆ ಎಂದು ಕರ್ಹಾ ಧಾಮ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಅಭಿಲಾಷ್ ತಿವಾರಿ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಈತ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂಬ ಇಚ್ಚೆಯನ್ನು ಶುಕ್ರವಾರ ರಾತ್ರಿ ತನ್ನ ಪತ್ನಿ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ.

- Advertisement -

Related news

error: Content is protected !!