Wednesday, July 2, 2025
spot_imgspot_img
spot_imgspot_img

ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಆತಂಕ-ಕೇಂದ್ರ ಸಚಿವರ ಸ್ಪಷ್ಟನೆ

- Advertisement -
- Advertisement -

ನವದೆಹಲಿ: ಉಕ್ರೇನ್ ನಲ್ಲಿ ಯುದ್ಧ ಆರಂಭಗೊಂಡ ಬಳಿಕ ತೈಲ ಬೆಲೆ ಏರಿಕೆಯ ಆತಂಕ ಎಲ್ಲರನ್ನು ಕಾಡಲಾರಂಭಿಸಿದೆ. ಭಾರತದ ಮೇಲೂ ಕೂಡ ಇದರ ಪರಿಣಾಮ ಬೀರಲಿದೆ ಎನ್ನಲಾಗಿದೆ. ಹಾಗೂ ಪೆಟ್ರೋಲ್, ಡೀಸೆಲ್ ದರದಲ್ಲಿ ಗಣನೀಯ ಏರಿಕೆಯ ಭೀತಿಯು ಇದೆ. ಆದರೆ ಕೇಂದ್ರ ಪೆಟ್ರೋಲಿಯಂ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಒಂದೆಡೆ ಯುದ್ಧದ ಬಿಸಿ ಮತ್ತೊಂದೆಡೆ ಪಂಚರಾಜ್ಯ ಚುನಾವಣಾ ಫಲಿತಾಂಶದ ಕಾವು ಇವುಗಳ ನಡುವೆ ಪೆಟ್ರೋಲ್, ಡೀಸೆಲ್ ದರ ಏರಿಕೆಯ ಬಿಸಿ. ಆದರೆ, ಚುನಾವಣಾ ಫಲಿತಾಂಶ ಹೊರ ಬೀಳುವ ತನಕ ಕೇಂದ್ರ ಸರಕಾರ ಬೆಲೆ ಏರಿಕೆ ಮಾಡದು ಎಂಬುವುದು ತಜ್ಞರ ಲೆಕ್ಕಾಚಾರ. ಆದರೆ, ಆ ಬಳಿಕ ಯಾವ ರೀತಿ ಏರಿಕೆಯಾಗಲಿದೆ ಎನ್ನುವುದೇ ಆತಂಕ ಹಾಗೂ ಕುತೂಹಲಕಾರಿ ವಿಚಾರ.

vtv vitla
vtv vitla

ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ, ತೈಲ ಕಂಪನಿಗಳು ಇಂಧನ ಬೆಲೆಗಳನ್ನು ನಿರ್ಧರಿಸುತ್ತವೆ. ಆದರೆ ದೇಶದಲ್ಲಿ ಕಚ್ಚಾ ತೈಲದ ಕೊರತೆಯಿಲ್ಲ ಎಂದು ಹೇಳಿದ್ದಾರೆ. ಇನ್ನು ನಾಗರಿಕರ ಹಿತದೃಷ್ಠಿಯಿಂದ ಸರಕಾರ ಒಂದು ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.

ದೇಶದಲ್ಲಿ ಸದ್ಯ ಯಾವುದೇ ರೀತಿಯಲ್ಲಿ ಕಚ್ಚಾ ತೈಲದ ಕೊರತೆ ಇಲ್ಲ. ಶೇ. 85ರಷ್ಟು ಕಚ್ಚಾ ತೈಲದ ಆಮದು ಮತ್ತು ಶೇ. 50-55ರಷ್ಟು ಅನಿಲದ ಮೇಲೆ ಅವಲಂಬಿತವಾಗಿದ್ದೇವೆ. ಆದರೂ ಸದ್ಯ ಯಾವುದೇ ಸಮಸ್ಯೆಯಾಗದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

- Advertisement -

Related news

error: Content is protected !!