Saturday, April 27, 2024
spot_imgspot_img
spot_imgspot_img

ಉಡುಪಿ ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಜಾಗ ನೀಡಿದ್ದರು ಎಂಬ ಮಿಥುನ್ ರೈ ಹೇಳಿಕೆಗೆ ಸಿಂಪಲ್ ಸ್ಟಾರ್‍ ಗರಂ..! ಬಕೆಟ್‌ ಅಲ್ಲ ಟ್ಯಾಂಕರ್ ಹಿಡಿತೀನಿ ಎಂದರು ರಕ್ಷಿತ್ ಶೆಟ್ಟಿ

- Advertisement -G L Acharya panikkar
- Advertisement -

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಕರಾವಳಿ ಕಾಂಗ್ರೆಸ್‌ ನಾಯಕ ಮಿಥುನ್ ರೈ ಅವರ ಹೇಳಿಕೆಗೆ ಗರಂ ಆಗಿದ್ದಾರೆ. ಹುಟ್ಟಿದೂರಿನ ಬಗ್ಗೆ ಮಿಥುನ್ ರೈ ಆಡಿದ ಮಾತಿಗೆ ಟ್ವಿಟರ್‌ನಲ್ಲಿ ತಿರುಗೇಟು ಕೊಟ್ಟಿದ್ದಾರೆ ರಕ್ಷಿತ್ ಶೆಟ್ಟಿ..!

ಕೃಷ್ಣನಗರಿ ಉಡುಪಿಯ ಕೃಷ್ಣಮಠಕ್ಕೆ ಮುಸ್ಲಿಂ ಅರಸರು ಜಾಗವನ್ನು ದಾನವಾಗಿ ನೀಡಿದ್ದರು ಎನ್ನುವ ಕೆಪಿಸಿಸಿ ಮುಖ್ಯ ಕಾರ್ಯದರ್ಶಿ ಮಿಥುನ್‌ ರೈ ಹೇಳಿಕೆಗೆ ರಕ್ಷಿತ್ ವಿರೋಧ ವ್ಯಕ್ತಪಡಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಈ ಅಭಿಮಾನಕ್ಕೆ ನೆಟ್ಟಿಗರು ಭೇಷ್‌ ಅಂದರೆ ಕೆಲವರು ವಿರೋಧಿಸಿದ್ದಾರೆ. ‘ದೇವನಗರಿ ಉಡುಪಿಯ ಇತಿಹಾಸ ಸಾವಿರಾರು ವರ್ಷಗಳ ಹಿಂದಿನದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ ಎಂದ ಮೇಲೆ ಸಾರ್ವಜನಿಕ ವೇದಿಕೆಯಲ್ಲಿ ಮೂರ್ಖತನದ ಮಾತನಾಡುವುದೇಕೆ? ಎಂದು ಪ್ರಶ್ನೆ ಮಾಡಿ ಟ್ವೀಟ್‌ ಮಾಡಿದ್ದಾರೆ.

ಮೂಡಬಿದಿರೆ ತಾಲೂಕಿನ ಪುತ್ತಿಗೆಯಲ್ಲಿ ನೂರಾನಿ ಮಸೀದಿಯಿಂದ ನಡೆದ ನಮ್ಮೂರ ಮಸೀದಿ ನೋಡ ಬನ್ನಿ ಎನ್ನುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಿಥುನ್‌ ರೈ ಮುಸ್ಲಿಂ ರಾಜರು ಉಡುಪಿಯ ಕೃಷ್ಣ ಮಠಕ್ಕೆ ಜಾಗ ನೀಡಿದ್ದರು ಎಂಬ ಹೇಳಿಕೆ ನೀಡಿದ್ದರು. ಈ ಮಾತಿಗೆ ಕರಾವಳಿ ಭಾಗದಲ್ಲಿ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

ಬಕೆಟ್‌ ಅಲ್ಲ ಟ್ಯಾಂಕರ್‍ ಹಿಡಿತೀನಿ..!
ರಕ್ಷಿತ್ ಶೆಟ್ರೆ ಜಾಸ್ತಿ ಯಾರಿಗೂ ಬಕೆಟ್ ಹಿಡಿಯೋಕೆ ಹೋಗ್ಬೇಡಿ ದೇವರು ಮೆಚ್ಚುವಂಥ ಕೆಲಸ ಮಾಡಿ ಅಷ್ಟು ಸಾಕು ಎಂದು ಪ್ರದೀಪ್ ಶೆಟ್ಟಿ ಎಂಬವರು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ರಕ್ಷಿತ್ ಶೆಟ್ಟಿ ಉಡುಪಿ ನನ್ನ ಜನ್ಮಸ್ಥಳ, ಬಕೆಟ್ ಅಲ್ಲ ಟ್ಯಾಂಕರ್‌ ಹಿಡಿತೀನಿ ಅಂತ ಖಡಕ್ ಆಗಿ ರಿಪ್ಲೈ ಕೊಟ್ಟಿದ್ದಾರೆ.

- Advertisement -

Related news

error: Content is protected !!