Tuesday, May 21, 2024
spot_imgspot_img
spot_imgspot_img

ದೇಶದಲ್ಲಿ ಶೇ.75ಕ್ಕೂ ಹೆಚ್ಚು ವಯಸ್ಕರು ಕೊವಿಡ್​ 19 ಲಸಿಕೆ ಸಂಪೂರ್ಣ ಡೋಸ್​ ಪಡೆದವರು; ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

- Advertisement -G L Acharya panikkar
- Advertisement -
suvarna gold

ಭಾರತದಲ್ಲಿ ಶೇ.75ರಷ್ಟು ವಯಸ್ಕರು ಪೂರ್ಣಪ್ರಮಾಣದ ಲಸಿಕೆ ಪಡೆದಿದ್ದಾರೆ (ಎರಡೂ ಡೋಸ್​) ಎಂದು ಇಂದು ಕೇಂದ್ರ ಆರೋಗ್ಯ ಇಲಾಖೆ ಸಚಿವ ಮನ್​ಸುಖ್​ ಮಾಂಡವಿಯಾ ತಿಳಿಸಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ದೇಶದ ಜನರಿಗೆ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸಿದ್ದಾರೆ. ದೇಶದಲ್ಲಿ ಶೇ.75ರಷ್ಟು ವಯಸ್ಕರು ಕೊರೊನಾ ವೈರಸ್​ ಲಸಿಕೆಯನ್ನು ಸಂಪೂರ್ಣವಾಗಿ ಪಡೆದಿದ್ದಾರೆ. ಇಂಥ ಒಂದು ಮಹತ್ವದ ಮೈಲಿಗಲ್ಲು ಸಾಧಿಸಲು ಸಹಾಯ ಮಾಡಿದ ಎಲ್ಲ ನಾಗರಿಕರಿಗೂ ಧನ್ಯವಾದಗಳು. ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಯಶಸ್ವಿಯಾಗಲು ಪ್ರಯತ್ನಿಸಿದ ಎಲ್ಲರಿಗೂ ಇದು ಹೆಮ್ಮೆಯ ವಿಚಾರ ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.

vtv vitla
vtv vitla

ಭಾರತದಲ್ಲಿ ಶೇ.75ರಷ್ಟು ವಯಸ್ಕರಿಗೆ ಎರಡೂ ಡೋಸ್​ ಲಸಿಕೆ ನೀಡಿಕೆಯಾಗಿದೆ. ಸಬ್​ ಕಾ ಸಾಥ್, ಸಬ್​ ಕಾ ಪ್ರಯಾಸ್​ ಮಂತ್ರದಡಿ ಈ ಸಾಧನೆ ಸಾಧ್ಯವಾಗಿದೆ. ಕೊರೊನಾ ವೈರಸ್​ ವಿರುದ್ಧ ಹೋರಾಟದಲ್ಲಿ ನಾವು ಇನ್ನಷ್ಟು ಪ್ರಬಲರಾಗಿದ್ದೇವೆ. ಕೊವಿಡ್ 19 ನಿಯಂತ್ರಣಕ್ಕೆ ಸಂಬಂಧಪಟ್ಟ ಎಲ್ಲ ನಿಯಮಗಳನ್ನೂ ಪಾಲಿಸುವ ಜತೆ, ಕೊರೊನಾ ಲಸಿಕೆ ಅಭಿಯಾನವನ್ನು ಇನ್ನಷ್ಟು ವೇಗಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಇಂದು ಹಿಂದಿಯಲ್ಲಿ ಟ್ವೀಟ್​ ಮಾಡಿದ್ದರು. ಅದನ್ನು ಶೇರ್ ಮಾಡಿಕೊಂಡ ಪ್ರಧಾನಿ ಮೋದಿ, ದೇಶದ ಜನತೆಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಕಳೆದ 24ಗಂಟೆಯಲ್ಲಿ 62 ಸಾವಿರಕ್ಕೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಒಟ್ಟಾರೆಯಾಗಿ 165.70 ಕೋಟಿ ಡೋಸ್​​​ ಲಸಿಕೆಯನ್ನು ಇದುವರೆಗೆ ನೀಡಲಾಗಿದೆ ಎಂದು ಹೇಳಿದೆ. ಕೊರೊನಾ ವಿರುದ್ಧ ಲಸಿಕೆ ನೀಡಿಕೆ 2021ರ ಜನವರಿ 16ರಂದು ಪ್ರಾರಂಭವಾಗಿದೆ. ಹಾಗೇ, ಈ ಬಾರಿ ಜನವರಿ 3ರಿಂದ 15-18ವರ್ಷದವರಿಗೂ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಇನ್ನೊಂದೆಡೆ ಆರೋಗ್ಯ ಕಾರ್ಯಕರ್ತರು, ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕಾರ್ಯಕರ್ತರಿಗೆ ಮತ್ತು 60ವರ್ಷ ಮೇಲ್ಪಟ್ಟು ಇತರ ರೋಗಗಳಿಂದ ಬಳಲುತ್ತಿರುವವರಿಗೆ ಕೊರೊನಾ ಲಸಿಕೆ ಬೂಸ್ಟರ್​ ಡೋಸ್​ ನೀಡಲಾಗುತ್ತಿದೆ.

vtv vitla
vtv vitla
- Advertisement -

Related news

error: Content is protected !!