Friday, September 29, 2023
spot_imgspot_img
spot_imgspot_img

ಮೊಟ್ಟಮೊದಲ ಬಾರಿಗೆ ಕಾಶ್ಮೀರ ಗಡಿಯಲ್ಲಿ ಮಹಿಳಾ ಸೈನಿಕರ ನಿಯೋಜನೆ

- Advertisement -G L Acharya panikkar
- Advertisement -

ಶ್ರೀನಗರ: ಮೊಟ್ಟಮೊದಲ ಬಾರಿಗೆ ಕಾಶ್ಮೀರ ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಯಲ್ಲಿ ಮಹಿಳಾ ಸೈನಿಕರನ್ನು ನಿಯೋಜನೆ ಮಾಡಲಾಗಿದೆ. ಅಸ್ಸಾಂ ರೈಫಲ್ಸ್ ನ ಮಹಿಳಾ ಸೈನಿಕರು ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ರೈಫಲ್ ವುಮೆನ್ ಎಂದು ಕರೆಯಲಾಗುತ್ತಿರುವ ಮಹಿಳಾ ಯೋಧರ ತಂಡ ಕಾಶ್ಮೀರದ ತಂಗ್ಧಾರ್ ಸೆಕ್ಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕಾಶ್ಮೀರದಲ್ಲಿ ಮೊದಲ ಬಾರಿಗೆ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ‘ರೈಫಲ್ ವುಮೆನ್’ ಕೆಲವೇ ದಿನಗಳಲ್ಲಿ ಸ್ಥಳೀಯ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿದೆ ಎಂದು ಅಸ್ಸಾಂ ರೈಫಲ್ಸ್ ಟ್ವೀಟ್ ಮಾಡಿದೆ. ಸ್ಥಳೀಯರು ಅವರನ್ನು ನಗುಮೊಗದಿಂದ ಬರಮಾಡಿಕೊಂಡಿದ್ದಾರೆ. ಇದು ಅಸ್ಸಾಂ ರೈಫಲ್ಸ್ನ ಮಹಿಳಾ ಸೈನಿಕರ ವೃತ್ತಿಪರತೆಗೆ ಸಾಕ್ಷಿಯಾಗಿದೆ ಎಂದು ಹೇಳಿದೆ.

‘ರೈಫಲ್ ವುಮೆನ್’ ಅಸ್ಸಾಂ ರೈಫಲ್ಸ್ನ ಒಂದು ಘಟಕವಾಗಿದ್ದು, ಇದು ಭಾರತದ ಅತ್ಯಂತ ಹಳೆಯ ಅರೆಸೈನಿಕ ಪಡೆ.

ಸೇನೆಯಲ್ಲಿ ಮಹಿಳೆಯರಿಗೂ ಸೈನಿಕರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕೆಂಬುದು ದೀರ್ಘಕಾಲದ ಬೇಡಿಕೆಯಾಗಿತ್ತು. ನಂತರ 2020ರ ಜನವರಿಯಲ್ಲಿ ಮಹಿಳಾ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ಸುಮಾರು 60 ವಾರಗಳ ಕಾಲ ತರಬೇತಿ ನೀಡಲಾಗಿತ್ತು.

- Advertisement -

Related news

error: Content is protected !!