Saturday, April 20, 2024
spot_imgspot_img
spot_imgspot_img

ದೇಶದ ಆರ್ಥಿಕ ಅಭಿವೃದ್ಧಿಯೊಂದಿಗೆ ತಮ್ಮ ಕನಸುಗಳನ್ನು ಜೋಡಿಸಲು ಯುವ ಜನರಿಗೆ ಪ್ರಧಾನಿ ಮೋದಿ ಕರೆ

- Advertisement -G L Acharya panikkar
- Advertisement -

ಭಾರತದ ಆರ್ಥಿಕ ಅಭಿವೃದ್ಧಿಗಾಗಿ ತಮ್ಮ ಕನಸನ್ನು ಜೋಡಿಸುವಂತೆ ಹೈದರಾಬಾದ್​ನ ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು.

ಆತ್ಮನಿರ್ಭರ್ ಭಾರತ್ ಸಾಕಾರಗೊಳ್ಳಲು ಸಣ್ಣ ಉದ್ಯಮಗಳನ್ನು ವಿಸ್ತರಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್ ಮತ್ತು ಯುವ ಉದ್ಯಮ ಪದವೀಧರರನ್ನು ಕೇಳಿದ್ದಾರೆ. ಹೈದರಾಬಾದ್‌ನ ಐಎಸ್‌ಬಿಯಲ್ಲಿ ನಡೆದ ಪದವಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶವು ತನ್ನ ಆರ್ಥಿಕ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿರುವಾಗ ದೇಶದೊಂದಿಗೆ ತಮ್ಮ ಕನಸುಗಳನ್ನು ಜೋಡಿಸಲು ಯುವ ಉದ್ಯಮ ನಿರ್ವಹಣಾ ಪದವೀಧರರಿಗೆ ಸಲಹೆ ಮಾಡಿದರು. ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡುವುದೆಂದರೆ ಕೋಟಿಗಟ್ಟಲೆ ಜನರಿಗೆ ಮತ್ತು ಇಡೀ ದೇಶಕ್ಕೆ ಉತ್ತೇಜನ ನೀಡುವುದಾಗಿದೆ ಎಂದರು. ತಂತ್ರಜ್ಞಾನದೊಂದಿಗೆ ಸಂಪರ್ಕ ಸಾಧಿಸಲು ಅವರನ್ನು ಕೇಳಿಕೊಂಡರು ಮತ್ತು ಐಎಸ್​ಬಿಯಂತಹ ಸಂಸ್ಥೆಗಳ ವಿದ್ಯಾರ್ಥಿಗಳು ಇದರಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಬಹುದು ಎಂದು ಹೇಳಿದರು.

ಐಎಸ್‌ಬಿ ಮತ್ತು ಮ್ಯಾನೇಜ್‌ಮೆಂಟ್ ಪದವೀಧರರಿಗೆ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಧ್ಯಯನ ಮಾಡಲು ಪ್ರಧಾನ ಮಂತ್ರಿ ಹೇಳಿದರು. ಈ ಹಿಂದೆ ಹಿಂದುಳಿದ ಜಿಲ್ಲೆಗಳೆಂದು ಕರೆಯಲಾಗುತ್ತಿದ್ದುದನ್ನು ಈಗ ಅಭಿವೃದ್ದಿಯ ಹೊಸ ಅಲೆ ಮತ್ತು ಆತ್ಮವಿಶ್ವಾಸ ಮೂಡಿಸಲು ಮಹತ್ವಾಕಾಂಕ್ಷೆಯ ಜಿಲ್ಲೆಗಳೆಂದು ಕರೆಯಲಾಗುತ್ತಿದೆ ಎಂದರು.

ದೇಶದ ಆರ್ಥಿಕ ಸ್ವರೂಪ ಬದಲಾಗುತ್ತಿದೆ ಎಂದು ಹೇಳಿದ ಮೋದಿ, ನಮ್ಮ ಉದ್ಯಮಗಳು ಈಗ ಲಕ್ಷಗಟ್ಟಲೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ಆತ್ಮನಿರ್ಭರ್ ಭಾರತ್‌ನ ಈ ಪಯಣದಲ್ಲಿ ಸಣ್ಣ ಉದ್ಯಮಗಳು ಮತ್ತು ಉದ್ಯಮಗಳನ್ನು ಕೊಂಡೊಯ್ಯುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಖೇಲೋ ಇಂಡಿಯಾ ಟು ಒಲಿಂಪಿಕ್ಸ್ ಪೋಡಿಯಂ ಯೋಜನೆಯನ್ನು ಉಲ್ಲೇಖಿಸಿದ ಪ್ರಧಾನಿ, ಕ್ರೀಡಾ ಕ್ಷೇತ್ರದಲ್ಲೂ ಪರಿವರ್ತನೆಯಾಗಿದೆ ಎಂದರು. ಭಾರತವನ್ನು ಆತ್ಮನಿರ್ಭರ್ ಮಾಡುವ ಮೂಲಕ ಭವಿಷ್ಯವನ್ನು ಸಿದ್ಧಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

- Advertisement -

Related news

error: Content is protected !!