Monday, June 15, 2026
spot_imgspot_img
spot_imgspot_img

ದೇಶದ ಮೊದಲ ತೃತೀಯ ಲಿಂಗಿ ದಂಪತಿಗಳ ಮಗುವಿನ ನಾಮಕರಣ; ಹೆಸರೇನು ಗೊತ್ತಾ..?

- Advertisement -
- Advertisement -

ಕೇರಳದ ಕೋಝಿಕ್ಕೋಡ್‌ನ ಉಮ್ಮಲತ್ತೂರ್‌ನ ತೃತೀಯಲಿಂಗಿ ದಂಪತಿ ಜಿಯಾ ಮತ್ತು ಜಹ್ಹಾದ್ ಮಗುವಿಗೆ ಜನ್ಮ ನೀಡಿದ್ದು ಇದೀಗ ದಂಪತಿ ಮಗುವಿಗೆ ನಾಮಕರಣ ಮಾಡಿದ್ದಾರೆ.

ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಜಹ್ಹಾದ್ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಜಿಯಾ ಮಗು ಹುಟ್ಟಿದ ಸುವರ್ಣ ಸಮಯವನ್ನು ಸಂಭ್ರಮಿಸಿದ್ದು, ಅಂದು ಮಗುವಿನ ಲಿಂಗ ಗುರುತನ್ನು ಬಹಿರಂಗಪಡಿಸಲು ದಂಪತಿಗೆ ನಿರಾಕರಿಸಿದ್ದರು.

ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಜಹ್ಹಾದ್ ಗೆ ಕಳೆದ ಫೆಬ್ರವರಿ 2ರಂದು ಹೆಣ್ಣು ಮಗುವಿನ ಜನನವಾಯಿತು. ಇದೀಗ ದಂಪತಿಗಳು ಮಗುವಿಗೆ ಜಬಿಯಾ ಸಹದ್ ಎಂದು ನಾಮಕರಣ ಮಾಡಿದ್ದಾರೆ.

ಹಾಲಿನ ಬ್ಯಾಂಕ್ ಮೂಲಕ ಮಗುವಿಗೆ ಹಾಲುಣಿಸಲು ದಂಪತಿ ನಿರ್ಧರಿಸಿದ್ದಾರೆ. ಜಿಯಾ ಓರ್ವ ನರ್ತಕಿಯಾಗಿದ್ದು ಜಹ್ಹಾದ್ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿದ್ದಾರೆ.

- Advertisement -

Related news

error: Content is protected !!