Thursday, April 25, 2024
spot_imgspot_img
spot_imgspot_img

ದೇಶಾದ್ಯಂತ ಜನೌಷಧಿ ಸಂಕಲ್ಪ ಪಾದಯಾತ್ರೆ

- Advertisement -G L Acharya panikkar
- Advertisement -

4ನೇ ಜನೌಷಧಿ ದಿವಸ್ 2022 ಆಚರಣೆ ಮಾರ್ಚ್ 1 ರಿಂದ ಮಾರ್ಚ್ 7, 2022 ರವರೆಗೆ 7 ದಿನಗಳ ಆಚರಣೆಯಾಗಲಿದೆ. ಜನೌಷಧಿ ಕೇಂದ್ರಗಳು ದೇಶದಾದ್ಯಂತ ಹಲವು ಕಡೆಗಳಲ್ಲಿ ಜನೌಷಧಿ ಸಂಕಲ್ಪ ಪಾದಯಾತ್ರೆಯನ್ನು ನಡೆಸಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನೌಷಧಿ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಪ್ರತಿ ವರ್ಷ ಮಾರ್ಚ್ 07 ರಂದು ಜನೌಷಧಿ ದಿವಸ್ ಆಚರಿಸುವುದಾಗಿ ಘೋಷಿಸಿದ್ದಾರೆ.

8600ಕ್ಕೂ ಹೆಚ್ಚು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಮೂಲಕ ಕೈಗೆಟುಕುವ ಬೆಲೆಯಲ್ಲಿ ಸುಲಭವಾಗಿ ಲಭ್ಯ ವಿರುವ ಗುಣಮಟ್ಟದ ಜೆನೆರಿಕ್ ಔಷಧಿಗಳ ಜಾಗೃತಿಯನ್ನು ಹರಡಲು ಪಾದಯಾತ್ರೆಗಳನ್ನು ನಡೆಸಲು ಉದ್ಧೇಶಿಸಲಾಗಿದೆ. ಈ ಪಾದಯಾತ್ರೆ ತಮ್ಮ ಕ್ಷೇತ್ರದಲ್ಲಿ ವಾಸಿಸುವ ನಾಗರಿಕರಿಗೆ ಯೋಜನೆಯ ಸಂದೇಶ ಮತ್ತು ಪ್ರಯೋಜನಗಳನ್ನು ಹರಡಲು ಆಯಾ ಪ್ರದೇಶಗಳಲ್ಲಿನ ಅನೇಕ ಸಾರ್ವಜನಿಕ ಪ್ರತಿನಿಧಿಗಳು ಸೇರಿಕೊಂಡು ನಡೆಸಿದ್ದಾರೆ.

- Advertisement -

Related news

error: Content is protected !!