Sunday, May 12, 2024
spot_imgspot_img
spot_imgspot_img

ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದಾಗ ಕೊಂದೇ ಬಿಟ್ಟ ಬಿಜೆಪಿ ಮುಖಂಡನ ಪುತ್ರ..! ಕೊಲೆಗೈದ ಆರೋಪಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು; ರೆಸಾರ್ಟ್ ಧ್ವಂಸಕ್ಕೆ ಸಿಎಂ ಆದೇಶ!

- Advertisement -G L Acharya panikkar
- Advertisement -

ರೆಸಾರ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ದೈಹಿಕ ಸಂಪರ್ಕ ಕ್ಕೆ ಒಪ್ಪದೇ ಇದ್ದಾಗ ಆಕೆಯನ್ನು ಕೊಲೆಗೈದ ಪ್ರಕರಣದಲ್ಲಿ ಮಗ ಬಂಧನದ ಬೆನ್ನಲ್ಲೇ ತಂದೆಯನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿದೆ. ರೆಸಾರ್ಟ್ ನಲ್ಲಿ ರಿಸಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಅಂಕಿತಾ ಎಂಬಾಕೆಯನ್ನು ಉತ್ತರಾಖಂಡ್ ನ ಹಿರಿಯ ಬಿಜೆಪಿ ಮುಖಂಡ ವಿನೋದ್‌ ಆರ್ಯಾ ಅವರ ಪುತ್ರ ಹಾಗೂ ರೆಸಾರ್ಟ್‌ ಮಾಲೀಕ ಪುಲ್ಕಿಟ್ ಆರ್ಯಾ ನನ್ನು ಪೊಲೀಸರು ಬಂಧಿಸಿದ್ದಾರೆ.

ಪುಲ್ಕಿಟ್ ತಂದೆ ವಿನೋದ್ ಆರ್ಯಾ ಬಿಜೆಪಿ ಹಾಗೂ ಆರ್ ಎಸ್ ಎಸ್ ಹಿರಿಯ ಮುಖಂಡರಾಗಿದ್ದು ಘಟನೆ ಬೆನ್ನಲ್ಲೇ ಪಕ್ಷದಿಂದ ಅವರನ್ನು ಉಚ್ಛಾಟಿಸಲಾಗಿದೆ. ಇದೇ ವೇಳೆ ಸ್ಥಳೀಯರು ಕೊಲೆ ಪ್ರಕರಣದಲ್ಲಿ ಆಕ್ರೋಶಗೊಂಡಿದ್ದು, ವಿನೋದ್‌ ಆರ್ಯಾ ಅವರ ಕಾರನ್ನು ಧ್ವಂಸಗೊಳಿಸಿದ್ದು, ರೆಸಾರ್ಟ್‌ ಗೆ ಬೆಂಕಿ ಹಚ್ಚಿ ಹಾನಿಗೊಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿದ್ದರೂ ಯುವತಿಯ ಶವ ಇನ್ನೂ ಪತ್ತೆಯಾಗಿಲ್ಲ. ಪುಲ್ಕಿಟ್ ಆರ್ಯಾ ರಿಸಪ್ಶನಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಕೊಂದು ಪಕ್ಕದ ನದಿಯಲ್ಲಿ ಎಸೆದಿದ್ದಾನೆ ಎನ್ನಲಾಗಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳೀಯರು ಇಬ್ಬರನ್ನೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಂತೆಯೇ ರೆಸಾರ್ಟ್‌ ಅನ್ನು ಬುಲ್ಡೋಜರ್‍ ತರಿಸಿ ಧ್ವಂಸ ಮಾಡಲಾಗಿದೆ ಎಂದು ಉತ್ತರಖಾಂಡ್‌ನ ಮಾಧ್ಯಮಗಳು ವರದಿ ಮಾಡಿದೆ. ಇಷ್ಟೇ ಅಲ್ಲ ಉತ್ತರಖಂಡದಲ್ಲಿನ ಅಕ್ರಮ ಹೊಟೆಲ್ ಹಾಗೂ ರೆಸಾರ್ಟ್ ಧ್ವಂಸಕ್ಕೆ ಪುಷ್ಕರ್ ಸಿಂಗ್ ಧಮಿ ಆದೇಶಿಸಿದ್ದಾರೆ.

ಪೌರಿ ಜಿಲ್ಲೆಯ ರಿಷಿಕೇಶ್ ಬಳಿ ಇರುವ ರೆಸಾರ್ಟ್ ಇದಾಗಿದ್ದು, ಸೋಮವಾರ ಈ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಸ್ವತಃ ಪುಲ್ಕಿಟ್ ಆರ್ಯಾ ಮತ್ತು ಆಕೆಯ ಕುಟುಂಬದವರು ದೂರು ನೀಡಿದ್ದರು. ನಂತರ ತನಿಖೆ ನಡೆಸಿದ ಪೊಲೀಸರಿಗೆ ದೂರು ನೀಡಿದ್ದ ಪುಲ್ಕಿಟ್ ಕೊಲೆ ಮಾಡಿರುವುದು ಪತ್ತೆ ಹಚ್ಚಿದ್ದಾರೆ. ತನಿಖೆಗೆ ಪುಲ್ಕಿಟ್ ಸಹಕರಿಸದೇ ಇರುವ ಬಗ್ಗೆ ಕುಟುಂಬದವರು ಮೊದಲಿನಿಂದಲೂ ಅನುಮಾನ ವ್ಯಕ್ತಪಡಿಸಿದ್ದರು. ಯುವತಿ ಕೊಲೆಯಾಗಿದ್ದು ದೃಢಪಟ್ಟಿದೆ. ಇಂದು ಚಿಲ್ಲಾ ಕಾಲುವೆಯಲ್ಲಿ ಶವ ಪತ್ತೆಯಾಗಿದೆ.

- Advertisement -

Related news

error: Content is protected !!