Saturday, May 4, 2024
spot_imgspot_img
spot_imgspot_img

ದ.ಕ. ಜಿಲ್ಲಾ ಇಂಟಕ್ ಜಿಲ್ಲಾಧ್ಯಕ್ಷರಾಗಿ ಚಿತ್ತರಂಜನ್ ಶೆಟ್ಟಿ ನೇಮಕ: ಅಧ್ಯಕ್ಷ ಪದವಿ ಹೂವಿನ ಹಾಸಿಗೆಯಾಗದೆ ಮುಳ್ಳಿನ ಹಾಸಿಗೆಯಾಗಲಿದೆಯೇ..?

- Advertisement -G L Acharya panikkar
- Advertisement -

ಇಂಟಕ್ ಮತ್ತು ಕೆಪಿಸಿಸಿ ಮುಖಂಡರ ಆದೇಶದಂತೆ ಚಿತ್ತರಂಜನ್ ಶೆಟ್ಟಿ ಅಧ್ಯಕ್ಷರಾಗಿ ನೇಮಕ:- ಇಂಟಕ್ ರಾಜ್ಯಾಧ್ಯಕ್ಷ ಲಕ್ಷ್ಮೀ ವೆಂಕಟೇಶ್ ಹೇಳಿಕೆ

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಇಂಟಕ್ ವಿಭಾಗದ ಅಧ್ಯಕ್ಷರಾದ ಡಾ.ಜಿ. ಸಂಜೀವ್ ರೆಡ್ಡಿ ಅವರ ಆದೇಶದಂತೆ, ರಾಷ್ಟ್ರೀಯ ಇಂಟಕ್ ವರಿಷ್ಠರಾದ ಎನ್.ಎಂ. ಅಡ್ಯಂತಾಯ ಅವರ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್‌ರವರ ಅನುಮತಿ ಮೇರೆಗೆ ಇಂಟೆಕ್ ರಾಜ್ಯಾಧ್ಯಕ್ಷರಾದ ಲಕ್ಷ್ಮೀ ವೆಂಕಟೇಶ್‌ರವರು ದ.ಕ. ಜಿಲ್ಲಾ ಇಂಟಕ್ ವಿಭಾಗದ ಜಿಲ್ಲಾಧ್ಯಕ್ಷರಾಗಿ ಚಿತ್ತರಂಜನ್ ಶೆಟ್ಟಿ ಅವರನ್ನು ನೇಮಕ ಮಾಡಿದ್ದಾರೆ.

ಚಿತ್ತರಂಜನ್ ಶೆಟ್ಟಿ ಅವರು ಈ ಹಿಂದೆ ಕಾಂಗ್ರೇಸ್ ಪಕ್ಷದ ತಳಮಟ್ಟದ ಸಕ್ರಿಯ ಕಾರ್ಯಕರ್ತರಾಗಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಸೇವಾದಳದ ಕಾರ್ಯದರ್ಶಿ, ಬಂಟ್ವಾಳ ಇಂಟಕ್ ಕಾರ್ಯದರ್ಶಿ, ಜಿಲ್ಲಾ ಇಂಟಕ್ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಸಂಯೋಕರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರಿಗೆ ಈ ಅಧ್ಯಕ್ಷ ಪದವಿ ಹೂವಿನ ಹಾಸಿಗೆಯಾಗದೆ ಮುಳ್ಳಿನ ಹಾಸಿಗೆಯಾಗಲಿದೆಯೇ? ಎಂಬುದು ಭಾರೀ ಚರ್ಚೆಗೆ ಒಳಗಾಗಿದೆ.

ರಾಕೇಶ್ ಮಲ್ಲಿಯ ಜೊತೆಯಲ್ಲಿ ಇಂಟಕ್ ಜಿಲ್ಲೆಯಲ್ಲಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ಸದಾಶಿವ ಶೆಟ್ಟಿ, ಶಶಿರಾಜ್ ಅಂಬಾಟ್, ಸುರೇಶ್ ಪಿಕೆ, ಸಿಎ ರಹೀಮ್, ಅವರ ಸಾಲಿನಲ್ಲಿ ಚಿತ್ತರಂಜನ ಶೆಟ್ಟಿಯ ಶ್ರಮ ಬಹಳಷ್ಟು ಇದೆ. ಚಿತ್ತರಂಜನ್ ಶೆಟ್ಟಿ ಅವಿರತ ಶ್ರಮ ವಹಿಸಿದರ ಪರಿಣಾಮ ಪ್ರಬಲವಾಗಿ ಸಂಘಟನೆ ಬೆಳೆಯಿತು.

ಜಿಲ್ಲೆಯ ಉದ್ದಗಲಕ್ಕೂ ಪಕ್ಷದ ಮತ್ತು ಇಂಟಕ್ ಸಂಘಟನೆಯ ಕಾರ್ಯಕರ್ತರ ಪರಿಚಯ ಇರುವ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬೊಂಡಾಲ ಜಗನ್ನಾಥ ಶೆಟ್ಟಿ ಅವರ ಪಟ್ಟ ಶಿಷ್ಯ. ಇದೇ ಕಾರಣದಿಂದ ಚಿತ್ತರಂಜನ್ ಶೆಟ್ಟಿ ಅವರನ್ನು ಇಂಟಕ್ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದರ ಪರಿಣಾಮ ಜಿಲ್ಲೆಯಲ್ಲಿ ಸಂಘಟನೆ ಪ್ರಬಲವಾಗಿ ಬೆಳೆಯಿತು.

ಆದರೆ ಚಿತ್ತರಂಜನ್ ಶೆಟ್ಟಿಯವರ ನಿಷ್ಠಾವಂತ ಪಕ್ಷದ ಕೆಲಸಕ್ಕಾಗಿ ಪಕ್ಷವು ಕೆಪಿಸಿಸಿ ಮಟ್ಟದ ಸಂಯೋಜಕರನ್ನಾಗಿಯೂ ಮಾಡಿತು. ಇದೀಗ ಅಡ್ಯಂತಾಯರು ಚಿತ್ತರಂಜನ್ ಶೆಟ್ಟಿಯವರನ್ನು ದ.ಕ. ಜಿಲ್ಲಾ ಇಂಟಕ್ ವಿಭಾಗದ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿ, ಗ್ರಾಮೀಣ ಪ್ರದೇಶದ ಯುವ ಪ್ರತಿಭೆ ಜಿಲ್ಲೆಯ ಕಾರ್ಮಿಕ ವರ್ಗದ ಪ್ರತಿಷ್ಠೆಯ ಅಧ್ಯಕ್ಷರನ್ನಾಗಿ ಮಾಡಿದ್ದರಿಂದ ಕಾರ್ಮಿಕರಲ್ಲಿ ಹೊಸ ಚೈತನ್ಯ ಮೂಡಿದಂತಾಗಿದೆ.

ಇಂದು ಇಂಟಕ್ ಸಂಘಟನೆಯ ನಾಯಕರುಗಳು ತಮ್ಮ ಸ್ವ ಪ್ರತಿಷ್ಠೆಯನ್ನು ಬದಿಗಿಟ್ಟು ಕಾಂಗ್ರೆಸ್ ಪಕ್ಷಕ್ಕೋಸ್ಕರ ಕಾರ್ಮಿಕರ ಒಳಿತಿಗೋಸ್ಕರ ನೂತನ ಅಧ್ಯಕ್ಷರಾದ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರಿಗೆ ಬೆನ್ನೆಲುಬಾಗಿ ನಿಂತು ಮತ್ತೊಮ್ಮೆ ಜಿಲ್ಲೆಯಲ್ಲಿ ಪ್ರಬಲವಾದ ಸಂಘಟನೆ ರೂಪುಗೊಳ್ಳುವಲ್ಲಿ ಪೂರ್ಣ ಸಹಕಾರವನ್ನು ನೀಡಿ ಹಾರೈಸಿದ್ದಾರೆ.

ಒಂದು ಕಾಲದ ಬದ್ಧ ವೈರಿಗಳಾದ ಮಾಜಿ ಸಚಿವ ರಮನಾಥ ರೈ ಹಾಗೂ ರಾಕೇಶ್ ಮಲ್ಲಿ ಈ ಇಬ್ಬರು ಬಂಟ ನಾಯಕರನ್ನು ರಾಜಿ ಮೂಲಕ ಒಂದು ಮಾಡಿದ ಕ್ರೆಡಿಟ್ ಬೊಂಡಾಲ ಚಿತ್ತರಂಜನ್ ಶೆಟ್ಟಿಯವರಿಗೆ ಸಲ್ಲುತ್ತದೆ ಎಂದು ಕಾಂಗ್ರೇಸ್ ಮೂಲಗಳಿಂದ ತಿಳಿದು ಬಂದಿದೆ.

ಈ ಬಗ್ಗೆ ಇಂಟೆಕ್‌ನ ರಾಜ್ಯಾಧ್ಯಕ್ಷರಾದ ಲಕ್ಷ್ಮೀ ವೆಂಕಟೇಶ್ ಅವರನ್ನು ಸಂಪರ್ಕಿಸಿದಾಗ “ಚಿತ್ತರಂಜನ್ ಶೆಟ್ಟಿಯವರನ್ನು ನಮ್ಮ ರಾಷ್ಟ್ರೀಯ ನಾಯಕರ ಆದೇಶದ ಮೇರೆಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌ರವರ ಅನುಮತಿ ಪಡೆದು ದ.ಕ ಜಿಲ್ಲಾ ಇಂಟೆಕ್‌ನ ಅಧ್ಯಕ್ಷರನ್ನಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇನ್ನು ಚಿತ್ತರಂಜನ್ ಶೆಟ್ಟಿಯವರು ಇಂಟೆಕ್ ಮತ್ತು ಕೆಪಿಸಿಸಿ ನ ವಿವಿಧ ಜವಬ್ಧಾರಿಗಳನ್ನು ನಿಷ್ಠೆಯಿಂದ ಮಾಡಿರುತ್ತಾರೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಅವರಿಗೆ ದ.ಕ ಜಿಲ್ಲಾ ಇಂಟೆಕ್‌ನ ಅಧ್ಯಕ್ಷರನ್ನಾಗಿ ಮಾಡಿರುವುದು ಕಾರ್ಯಕರ್ತರಲ್ಲಿ ಸಂತಸ ತಂದಿದೆ. ಇನ್ನು ಈ ಬಗ್ಗೆ ಇಂಟೆಕ್‌ನ ಮುಖಂಡ ರಾಕೇಶ್ ಮಲ್ಲಿಯವರ ಅಸಮಾಧಾನದ ಬಗ್ಗೆ ಕೇಳಿದಾಗ ಭೂಗತ ಪ್ರಪಂಚದ ಕಾರ್ಯವೈಖರಿಗೆಲ್ಲ ಇಂಟೆಕ್‌ನಲ್ಲಿ ಅವಕಾಶ ಇರುವುದಿಲ್ಲ. ಒಂದು ಕಾಲದಲ್ಲಿ ರಾಕೇಶ್ ಮಲ್ಲಿ ಇಂಟೆಕ್‌ನ ಜವಬ್ಧಾರಿ ವಹಿಸಿಕೊಂಡಿರುವಾಗ ಇದೇ ಚಿತ್ತರಂಜನ್ ಶೆಟ್ಟಿ, ಸದಾಶಿವ ಶೆಟ್ಟಿ, ಶಶಿರಾಜ್ ಅಂಬಾಟ್, ಸುರೇಶ್ ಪಿ ಕೆ, ಸಿ ಎ ರಹೀಮ್, ಇವರೆಲ್ಲರ ಅವಿರತ ಶ್ರಮದಿಂದ ಇಂಟೆಕ್ ದ.ಕ ಜಿಲ್ಲೆಯಲ್ಲಿ ಬೆಳೆಯಲು ಸಾಧ್ಯವಾಯಿತು. ರಾಜ್ಯಾಧ್ಯಕ್ಷರಾಗಿ ಇಂಟಕ್‌ನ ಮಖಂಡರ ಮತ್ತು ಕೆಪಿಸಿಸಿ ಮುಖಂಡರ ಆದೇಶದಂತೆ ಚಿತ್ತರಂಜನ್ ಶೆಟ್ಟಿಯವರ ನೇಮಕವಾಗಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.

- Advertisement -

Related news

error: Content is protected !!