Wednesday, April 24, 2024
spot_imgspot_img
spot_imgspot_img

ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ವಿಲ್ಫ್ರೆಡ್ ಡಿಸೋಜರವ ಮಾಧ್ಯಮ ಕ್ಷೇತ್ರ ಸಾಧನೆಯ ಕಿರುನೋಟ

- Advertisement -G L Acharya panikkar
- Advertisement -

1997 ರಲ್ಲಿ ತೀರಾ ಗ್ರಾಮೀಣ ಭಾಗದಿಂದ ಉದ್ಯೋಗ ಅರಸಿ ಮಂಗಳೂರಿಗೆ ಕಾಲಿಟ್ಟ ವಿಲ್ಫ್ರೆಡ್‌ರವರು ಪತ್ರಿಕೋದ್ಯಮ ಆಳ-ಅಗಲ ಗೊತ್ತಿಲ್ಲದ ಆ ದಿನಗಳಲ್ಲಿ ಮಾಧ್ಯಮ ಜಗತ್ತಿನ ಅನುಭವವೇ ಇಲ್ಲದ ಆ ಹೊತ್ತಲ್ಲಿ ದೃಶ್ಯ ಮಾಧ್ಯಮದ ನಂಟಿಗೆ ಬಿದ್ದಿದ್ದರು. ಈಗಿನಷ್ಟು ಟಿವಿ ಚಾನೆಲ್‌ಗಳಿಲ್ಲದ ಆ ದಿನಗಳಲ್ಲಿ ಕ್ಯಾಮಾರ ಹಿಡಿದ ಇವರಿಗೆ ಮಾಧ್ಯಮ ಜಗತ್ತಿನಲ್ಲಿ ಈಜಲು ಕಲಿಸಿದವರು ಹಲವರು. ಯಾವುದೋ ಉದ್ಯೋಗಕ್ಕಾಗಿ ಬಂದು ಗಟ್ಟಿಯಾಗಿ ನೆಲೆಯಾಗಿದ್ದು ಮಾತ್ರ ಮಾಧ್ಯಮ ಕ್ಷೇತ್ರದಲ್ಲಿ.

1997ರಲ್ಲಿ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿಯ ನಿವಾಸದಿಂದ ಇಳಿದು ಬಂದ ಇವರ ಮಾಧ್ಯಮ ವೃತ್ತಿಗೆ ಸದ್ಯ ಸುಧೀರ್ಘ 25 ವರ್ಷ. ಈ ತುಂಬು ಅನುಭವ ಹೊತ್ತ ಇವರ ಮಾಧ್ಯಮ ಸೇವೆ ಗುರುತಿಸಿ ದ.ಕ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವದ ಅಂಗವಾಗಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

25 ವರ್ಷಗಳ ಹಿಂದೆ ನ್ಯೂ ಮ್ಯಾಂಗಳೂರ್ ಚಾನೆಲ್‌ನಲ್ಲಿ ಕ್ಯಾಮೆರಾ ಮ್ಯಾನ್ ವೃತ್ತಿಯನ್ನು ಪ್ರಾರಂಭಿಸಿದ ಇವರ ವೃತ್ತಿ ಜೀವನವು ಇಂದು ಟಿವಿ9 ಚಾನೆಲ್‌ನಲ್ಲಿ ಮಂಗಳೂರು ವ್ಯಾಪ್ತಿಯ ಕ್ಯಾಮೆರಾಮ್ಯಾನ್ ಆಗಿ ತಮ್ಮ ಗರಿಮೆಯನ್ನು ಹೆಚ್ಚಿಸಿದೆ. 1997-2000 ರವರೆಗೆ ನ್ಯೂ ಮ್ಯಾಂಗಳೂರ್ ಚಾನೆಲ್ ನಲ್ಲಿ 3 ವರ್ಷಗಳ ಸೇವೆ, 2000-2003 ರವರೆಗೆ ಸಿಟಿ ಕೇಬಲ್ ನಲ್ಲಿ 3 ವರ್ಷಗಳ ಸೇವೆ, 2003-2005 ರವರೆಗೆ ಉದಯ ಟಿವಿಯಲ್ಲಿ 2 ವರ್ಷಗಳ ಸೇವೆ, 2005- 2006 ರ ವರೆಗೆ ದೂರದರ್ಶನದಲ್ಲಿ 1 ವರ್ಷ ಸೇವೆ, 2006 ಅಗಸ್ಟ್ ನಿಂದ ಇಂದಿನವರೆಗೆ ಟಿವಿ9 ಮಾಧ್ಯಮದಲ್ಲಿ 16 ವರ್ಷಗಳ ಸೇವೆ ಮುಂದುವರೆಯುತ್ತಿರುವ ಇವರು ದಕ್ಷಿಣ ಕನ್ನಡ ಜಿಲ್ಲಾ ಪರ್ತಕರ್ತರ ಸಂಘದ ಸದಸ್ಯನಾಗಿ, ಸಂಘದ ಕಾರ್ಯದರ್ಶಿಯಾಗಿ, ಸಂಘದ ಉಪಾಧ್ಯಕ್ಷ, ಪ್ರೆಸ್ ಕ್ಲಬ್ ನ ಕಾರ್ಯಕಾರಿಣಿ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ.

ವೃತ್ತಿಯ ಜೊತೆ ಜೊತೆಗೆ ಸಾಮಾಜಿಕ ಸೇವೆಯಲ್ಲೂ ತನ್ನನ್ನು ತೊಡಿಗಿಸಿಕೊಂಡಿರುವ ಇವರ ಸಮಾಜ ಸೇವೆ ಅಪಾರ. ಮಂಗಳೂರಿನ ಕದ್ರಿಯಲ್ಲಿ ಅಶಕ್ತ ಕುಟುಂಬದ ಪಾಳು ಬೀಳುವ ಸ್ಥಿತಿಯಲ್ಲಿದ್ದ ಮನೆಯನ್ನು ದುರಸ್ಥಿಗೊಳಿಸಲು ಸಾಧ್ಯವಿಲ್ಲದ ಕಾರಣ ಮಂಜುನಾಥ ಫ್ರೆಂಡ್ಸ್ ಸರ್ಕಲ್ ಕದ್ರಿ ಎಂಬ ಸಂಘಟನೆ ವತಿಯಿಂದ ಇವರ ನೇತೃತ್ವದಲ್ಲಿ 2014 ರಲ್ಲಿ ಹೊಸ ಮನೆ ಕಟ್ಟಿ ಹಸ್ತಾಂತರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದ ಮಹಿಳೆಯೊಬ್ಬರ ಕುಟುಂಬಕ್ಕೆ ಡೆನಿಮ್ ಗೈಸ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ಅದರ ನೇತಾರನಾಗಿ 2018 ರಲ್ಲಿ ಹೊಸ ಮನೆ ಕಟ್ಟಿ ಹಸ್ತಾಂತರಿದ್ದಾರೆ. ಜೊತೆಗೆ ಗ್ರಾಮದಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಅವರನ್ನು ಸನ್ಮಾನ ಮಾಡಿ ಹುರಿದುಂಬಿಸುತ್ತಾ, ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಸರಕಾರಿ ಬಸ್ ವ್ಯವಸ್ಥೆಯನ್ನು ಒದಗಿಸುವಲ್ಲಿ ಹಾಗೂ ಗ್ರಾಮದ ರಸ್ತೆಗಳನ್ನು ದುರಸ್ಥಿಗೊಳಿಸಲು ಸರಕಾರಕ್ಕೆ ಒತ್ತಡ ಹಾಕಿ ದುರಸ್ಥಿಗೊಳ್ಳುವಂತೆ ಮಾಡಿದ ಕಾರ್ಯದಲ್ಲಿ ಇವರ ಶ್ರಮ ಅಪಾರ… ಈ ಎಲ್ಲಾ ಸಮಾಜ ಸೇವಗೆ ಬೆನ್ನೆಲುಬಾಗಿ ಸಹಕರಿಸಿದ್ದೇ ಪತ್ರಿಕೋದ್ಯಮ ಕ್ಷೇತ್ರ.

ಸಿಹಿ-ಕಹಿಗಳ ಜೊತೆ ವಿಡಿಯೋ ಜರ್ನಲಿಸ್ಟ್ ಆಗಿ ಇವರು ಎದುರಿಸಿದ ಸವಾಲುಗಳು ಹತ್ತಾರು. ಮಂಗಳೂರು ವಿಮಾನ ದುರಂತ, ಡೆಂಡೆನ್ ಹಡಗು ದುರಂತ, ಸೂರಲ್ಪಾಡಿ ಗಲಾಟೆ, ದ.ಕ ಜಿಲ್ಲೆಯ ಹಲವು ಕೋಮು ಸಂಘರ್ಷಗಳ ಹೊತ್ತಲ್ಲಿ ಪ್ರಾಣ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಿದ್ದು ಇವರ ವೃತ್ತಿ ಜೀವನದ ಮರೆಯಲಾಗದ ಘಟನೆಗಳು. ಅದಕ್ಕೂ ಮಿಗಿಲಾಗಿ ಟಿವಿ9 ಆಗಿನ ವರದಿಗಾರರಾಗಿದ್ದ ರಾಜೇಶ್ ರಾವ್ ಹಾಗೂ ಆಗಿನ ಸರ್ಕಾರದ ಕಾರಣಕ್ಕೆ ಕೇರಳದ ಅಪಹರಣಕಾರರ ಕೈಯಿಂದ ಬದುಕಿ ಬಂದಿದ್ದ ವಿಲ್ಫ್ರೆಡ್ ರವರ ಆ ದಿನಗಳಲ್ಲಿ ಇವರ ನೆರವಿಗೆ ನಿಂತಿದ್ದು ಎರಡೂ ರಾಜ್ಯದ ಸರ್ಕಾರಗಳು. ಮರಳು ಅಕ್ರಮದ ವಿರುದ್ದ ನಿಂತ ಕಾರಣಕ್ಕೆ ಅಪಹರಣಕಾರರ ಕೈಯ್ಯಲ್ಲಿ ಸಾವು-ಬದುಕಿನ ಸ್ಥಿತಿಯಲ್ಲಿದ್ದ ಇವರಿಗೆ ಮತ್ತೆ ಪುನರ್ಜನ್ಮ ಸಿಕ್ಕಿಂತಾಗಿತು. ಇವೆಲ್ಲವೂ ವಿಲ್ಫ್ರೆಡ್‌ರವರು ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಸವಾಲುಗಳು…

“ಇದೆಲ್ಲಾ ಸಾಧ್ಯವಾಗಿದ್ದು ನನ್ನ ಪತ್ರಕರ್ತ ವೃತ್ತಿಯ ಕಾರಣದಿಂದ. ಪತ್ರಕರ್ತನಾಗಿ ಸುಧೀರ್ಘ ಅವಧಿಯಲ್ಲಿ ಸಾಮಾಜಿಕ ಬದುಕು ಮತ್ತು ವೃತ್ತಿ ಬದುಕು ಎಲ್ಲದರಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದು ಪತ್ರಿಕೋದ್ಯಮ. ನನ್ನ ಸುಧೀರ್ಘ ಅವಧಿಯ ವೃತ್ತಿ ಬದುಕಿಗೆ ಜೊತೆಯಾಗಿ ನಿಂತವರು ತಂದೆ, ತಾಯಿ, ಪತ್ನಿ,ಕುಟುಂಬಿಕರು ಹಾಗೂ ಗೆಳೆಯರು, ಪತ್ರಕರ್ತ ಮಿತ್ರರು.. ಇವರಿಗೆಲ್ಲರಿಗೂ ಸದಾ ಆಭಾರಿಯಾಗಿರುತ್ತೇನೆ’ ಎಂದು ಹೇಳ್ತಾರೆ ವಿಲ್ಫ್ರೆಡ್‌ರವರು ಬದುಕು ಸಾಗಿದೆ, ವೃತ್ತಿ ಬದುಕು ಬದುಕಿನ ಜೊತೆ ಕೈ ಜೋಡಿಸಿದೆ.. ಎದುರಿಸಿದ ಸವಾಲುಗಳು, ಸಮಾಜಕ್ಕೆ ಮಾಡಿದ ಸೇವಾ ಕಾರ್ಯಗಳು ಇಂದು ನಿಮ್ಮನ್ನು ಸಾಧಕನನ್ನಾಗಿಸಿದೆ… ಸಮಾಜಕ್ಕೆ ನಿಮ್ಮಿಂದ ಇನ್ನಷ್ಟು ಸೇವೆ ಸಂದಲಿ, ನಿಮ್ಮ ವೃತ್ತಿ ಜೀವನವು ನಿಮ್ಮನ್ನು ಇನ್ನಷ್ಟು ಬೆಳಸಲಿ ಎಂಬುದು ನಮ್ಮ ಹಾರೈಕೆ.

- Advertisement -

Related news

error: Content is protected !!