Wednesday, May 15, 2024
spot_imgspot_img
spot_imgspot_img

ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಬೋಳಂತೂರು ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾದ L.K.G, U.K.G ಕೊಠಡಿ ಉದ್ಘಾಟನೆ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ

- Advertisement -G L Acharya panikkar
- Advertisement -

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೋಳಂತೂರು ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾದ L.K.G & U.K.G ಕೊಠಡಿ ಉದ್ಘಾಟನೆ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.
ಬಂಟ್ವಾಳ ತಾಲ್ಲೂಕಿನ ಶತಮಾನ ಪೂರೈಸಿದ ಕಲ್ಲಡ್ಕ ಸಮೀಪದ ಬೋಳಂತೂರು ಶಾಲೆಯಲ್ಲಿ ಈವರೆಗೆ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೈದು ದೇಶ-ವಿದೇಶಗಳಲ್ಲಿ ವೃತಿಪರತೆಯೊಂದಿಗೆ ಯಶಸ್ಸಿನ ನೆಲೆ ಕಂಡುಕೊಂಡಿದ್ದಾರೆ. ಕ್ರೀಡಾರಂಗದಲ್ಲಿ ಮಿಂಚಿದ ಅದೇಷ್ಟೋ ಪ್ರತಿಭೆಗಳು ಇದೇ ಶಾಲೆಯ ವಿದ್ಯಾರ್ಥಿಗಳೆಂಬುದು ಇಲ್ಲಿನ ಹೆಮ್ಮೆಯಾಗಿದೆ. ಅದಲ್ಲದೇ ರಾಜಕೀಯ,ಸಾಮಾಜಿಕ,ಉದ್ಯಮ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವುದು ಇಲ್ಲಿನ ಹಳೆ ವಿದ್ಯಾರ್ಥಿಗಳೆಂಬುದು ಈ ಶಾಲೆಯ ಹಿರಿಮೆಗೆ ಮತ್ತೊಂದು ಗರಿಯಾಗಿದೆ.


ಇಂಗ್ಲೀಷ್ ಕಲಿಕಾ ವ್ಯಾಮೋಹದಿಂದ ಸರಕಾರಿ ಶಾಲೆಗಳು ಮುಚ್ಚುತ್ತಿರುವ ಇಂದಿನ ಕಾಲಘಟ್ಟದಲ್ಲಿ ಇಲ್ಲಿನ ಎಸ್.ಡಿ.ಎಂ.ಸಿ. ಮತ್ತು ಹಳೆವಿದ್ಯಾರ್ಥಿಗಳ ಸಹಕಾರದಿಂದ ನೂತನವಾಗಿ ಎರಡು L.K.G ಹಾಗೂ U.K.G ತರಗತಿ ಕೊಠಡಿಗಳನ್ನು ಕೊಡುಗೆಯಾಗಿ ನೀಡುವುದರ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದರ ಉದ್ಘಾನೆಯನ್ನು ಆನಂತ ಪದ್ಮನಾಭ ಬಳ್ಳಕ್ಕುರಾಯರು ಮತ್ತು ಇಸ್ಮಾಯಿಲ್ ಅವರು ನೇರವೇರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಮಕ್ಕಳು ತಮ್ಮ ಪ್ರಾರ್ಥನಾ ಹಾಡಿನೊಂದಿಗೆ ಆರಂಭಿಸಿದರು. ಆಗಮಿಸಿದ ಅತಿಥಿಗಳು ಹಾಗೂ ಗಣ್ಯರನ್ನು ಶಾಲೆಯ ಹಿರಿಯ ದೈಹಿಕ ಶಿಕ್ಷಕರಾದ ಹರೀಶ್.ಬಿ. ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಗೀತಾ.ಎಸ್.ಅವರು ಪ್ರಾಸ್ತಾವಿಕ ಭಾಷಣದ ಮೂಲಕ ಶಾಲೆಯ ಅಭಿವೃದ್ಧಿ ಹಾಗೂ ಇನ್ನಿತರ ಚಟುವಟಿಕೆಗಳ ಬಗ್ಗೆ ಸಭಿಕರಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಿದರು. ವಿವಿಧ ಸಂಧರ್ಭಗಳಲ್ಲಿ ಸೇವೆ ಸಲ್ಲಿಸಿದ ಊರಿನ ಹಿರಿಯ ಚೇತನರಾದ ಶ್ರೀ ಕೇಶವಯ್ಯ.ಎಸ್.,ಶ್ರೀಮತಿ ಸುರೇಶಿನಿ, ಶ್ರೀ ಇಸ್ಮಾಯಿಲ್, ಶ್ರೀ ಸಂದೇಶ್.ಎಚ್.ನಾಯ್ಕ್, ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.


ಒಂದನೇ ತರಗತಿಯಿಂದ ಐದನೇ ತರಗತಿಯವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಶಾಲಿಮರ್ ಬಿಲ್ಡರ್ ಇದರ ಮಾಲಕರೂ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ನಮ್ಮ ಪರಿಸರದ ಸುರಿಬೈಲು ನಿವಾಸಿ ಬಶೀರ್ ಆಹ್ಮದ್ ಶಾಲಿಮಾರ್ ಅವರು ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರೂ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಆಬ್ಬಾಸ್ ಆಲಿ, ಎಸ್.ಡಿ.ಎಂ.ಸಿ ಅದ್ಯಕ್ಷರಾದ ಬಶೀರ್ ನಾರಂಕೋಡಿ, ಬೋಳಂತೂರು ಗ್ರಾಮ.ಪಂಚಾಯತ್ ಅಭಿವೃದ್ದಿ ಅಧಿಕಾರಿ ಪುಷ್ಪ.ಎಂ., ಬೊಳಂತೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರೂ ಹಾಲಿ ಸದಸ್ಯರಾದ ಚಂದ್ರಶೇಖರ್ ರೈ ನಾರ್ಶ, ಅಶ್ರಫ್ ಸುರಿಬೈಲ್, ಯಾಕೂಬ್ ದಂಡೆಮಾರ್, ಹಿರಿಯ ವಿದ್ಯಾರ್ಥಿ ಹಾಗೂ ಸಾಮಾಜಿಕ ನೇತಾರ ಜಯರಾಮ್ ರೈ ಗುಡ್ಡೆಮಾರ್, ಹಳೆ ವಿದ್ಯಾರ್ಥಿ ಸಂಘದ ನೂತನ ಅದ್ಯಕ್ಷರಾದ ತಮೀಮ್ ಬೊಳಂತೂರು,ಕಾರ್ಯದರ್ಶಿ ಅಮೀರ್, ಇಸ್ಮಾಯಿಲ್ ಬೊಳಂತೂರು, ಉಸ್ಮಾನ್ ಬಂಗಾರಕೋಡಿ ,ಅಮೀನ್ ಬೀಡಿ ಮಾಲಕರಾದ ಸುರೇಂದ್ರ ಅಮೀನ್, ಪವಿತ್ರ ಬೀಡಿ ಮಾಲಕರಾದ ರಪೀಕ್.ಕೆ.ಪಿ.ಬೈಲ್,ಯುವ ಉದ್ಯಮಿ ಸಲೀಂ ಕುಡುಂಬಕೋಡಿ,ಸಲೀಂ ಬೊಟ್ಟಿಗದ್ದೆ,ಹಸೈನಾರ್ ಟಿ.ತಾಳಿತ್ತನೂಜಿ ಇನ್ನಿತರರು ಉಪಸ್ಥಿತರಿದ್ದರು. ಜಾತಿ-ಮತ ಬೇದವಿಲ್ಲದೆ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘಟಿತ ಒಗ್ಗೂಡಿಕೆ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ಕಾರ್ಯಕ್ರಮವನ್ನು ಹಮೀದ್ ಗೋಳ್ತಮಜಲ್ ನಿರೂಪಿಸಿ ಧನ್ಯವಾದ ಸಲ್ಲಿಸಿದರು.

- Advertisement -

Related news

error: Content is protected !!