Sunday, May 12, 2024
spot_imgspot_img
spot_imgspot_img

ಧರ್ಮಸ್ಥಳ: ಇಂಡೋ-ಪಾಕ್ ಯುದ್ಧದಲ್ಲಿ ಬಳಕೆಯಾಗಿದ್ದ ಯುದ್ಧ ಟ್ಯಾಂಕ್ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಸೇರ್ಪಡೆ

- Advertisement -G L Acharya panikkar
- Advertisement -

ಉಜಿರೆ: ಧರ್ಮಸ್ಥಳಕ್ಕೆ ಮತ್ತೊಂದು ಗರಿಮೆ ಸೇರಿಕೊಂಡಿದೆ. ಲಕ್ಷಾಂತರ ಮಂದಿಯನ್ನು ಸೆಳೆಯುವ ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯಕ್ಕೆ ಮತ್ತೊಂದು ಅಮೂಲ್ಯ, ಗೌರವ ಇಮ್ಮಡಿಗೊಳಿಸುವ ವಸ್ತುವೊಂದು ಸೇರಿಕೊಂಡಿದೆ. ಇಂಡೋ-ಪಾಕ್ ಯುದ್ಧದಲ್ಲಿ ಬಳಕೆಯಾಗಿದ್ದ ಯುದ್ಧ ಟ್ಯಾಂಕ್ ಧರ್ಮಸ್ಥಳಕ್ಕೆ ಬಂದಿಳಿದಿದೆ. ಇದನ್ನು ಇಲ್ಲಿನ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು.

ಭಾರತದ ರಕ್ಷಣಾ ಸಚಿವಾಲಯದಿಂದ ಪೂನಾದ ಕೇಂದ್ರೀಯ ರಕ್ಷಣಾ ಡಿಪೋದ ಮೂಲಕ ಮಂಗಳವಾರ ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯಕ್ಕೆ ಟಿ-565 ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು.

ದೇಶದ ರಕ್ಷಣಾ ಕಾರ್ಯದಲ್ಲಿ ಸುಮಾರು 40 ವರ್ಷಗಳ ಕಾಲ ಇದು ಬಳಕೆಯಾಗಿದೆ. ಪ್ರಧಾನಿ ಇಂದಿರಾ ಗಾಂಧಿಯ ಅವಧಿಯಲ್ಲಿ ನಡೆದ 1971ರ ಇಂಡೋ-ಪಾಕ್ ಯುದ್ಧದಲ್ಲಿ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಈ ಯುದ್ದ ಟ್ಯಾಂಕ್ ಬಳಕೆಯಾಗಿದೆ.

ತಾಂತ್ರಿಕ ಮಾಹಿತಿ: 40 ಟನ್‌ಗಳಷ್ಟು ತೂಕ ಹೊಂದಿರುವ ಟ್ಯಾಂಕ್ 9 ಅಡಿ ಎತ್ತರ, 27.6 ಅಡಿ ಉದ್ದ ಮತ್ತು 10.8 ಅಗಲ ಹೊಂದಿದೆ. ಗರಿಷ್ಠ ವೇಗ: ಗಂಟೆಗೆ 51 ಕಿ.ಮೀ. ಸಾಮರ್ಥ್ಯ: 500 ಅಶ್ವಶಕ್ತಿ. 1968ರಲ್ಲಿ ಭಾರತೀಯ ಸೇನೆಗೆ ಇದನ್ನು ಸೇರಿಸಲಾಯಿತು. 1971 ರ ಭಾರತ – ಪಾಕಿಸ್ತಾನ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 2011 ರಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿತು.

- Advertisement -

Related news

error: Content is protected !!