Thursday, April 25, 2024
spot_imgspot_img
spot_imgspot_img

ಧರ್ಮಸ್ಥಳ: ಯಾತ್ರಾರ್ಥಿಗಳೇ ಈತನ ಟಾರ್ಗೆಟ್‌..! ಅಂತರ್‌ ರಾಜ್ಯ ಕಳ್ಳ ಪೊಲೀಸ್ ಬಲೆಗೆ

- Advertisement -G L Acharya panikkar
- Advertisement -

ಧರ್ಮಸ್ಥಳ: ನೇತ್ರಾವತಿ ಸ್ನಾನ ಘಟ್ಟದ ಬಳಿಯಿಂದ ಶ್ರೀ ಕ್ಷೇತ್ರಕ್ಕೆ ಯಾತ್ರಾರ್ಥಿಯಾಗಿ ಬಂದ ಕುಂದಾಪುರ ಮೂಲದ ಶ್ರೀಧರ ನಾಯರಿ ಎಂಬವರು ಸ್ನಾನ ಮಾಡುವ ಸಮಯದಲ್ಲಿ ತನ್ನ ಬ್ಯಾಗಿನಲ್ಲಿ ಇರಿಸಿದ್ದ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿತ್ತು. ಈ ಬಗ್ಗೆ ಶ್ರೀಧರ ನಾಯರಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಉಪನಿರೀಕ್ಷಕರ ತಂಡವು ಆರೋಪಿ ಮಹಾರಾಷ್ಟ್ರದ ಮಿತುನ್ ಚೌವಾಣ್ (31)ವರ್ಷ ಬಂಧಿಸಿದ್ದಾರೆ. ಆರೋಪಿಯಿಂದ ಅಂದಾಜು 2.4 ಲಕ್ಷ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ದೇಶದ ವಿವಿಧ ಪ್ರಸಿದ್ಧ ಯಾತ್ರಾ ಸ್ಥಳಗಳಿಂದ ಕಳ್ಳತನ ಮಾಡುತ್ತಿದ್ದ. ಆರೋಪಿಯ ಮೇಲೆ ಮಹಾರಾಷ್ಟ್ರ ರಾಜ್ಯದ ಪೂಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುವುದು ಬಹಿರಂಗವಾಗಿದೆ.

ಪತ್ತೆ ತಂಡದಲ್ಲಿ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಧೀಕ್ಷಕರು ಬಂಟ್ವಾಳ ಉಪವಿಭಾಗ ಪ್ರಕಾಶ್ ಸಿಂಗ್ ತೋರಭ್ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ಬೆಳ್ತಂಗಡಿ ವೃತ್ತ ಶಿವಕುಮಾರ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಕೃಷ್ಣಕಾಂತ್ ಪಾಟೀಲ್ ರವರ ವಿಶೇಷ ತಂಡದ ಸಿಬ್ಬಂದಿಗಳಾದ ಹೆಚ್ ಸಿ ಪ್ರಶಾಂತ್, ಹೆಚ್ ಸಿ ರಾಹುಲ್, ಪಿಸಿ ಸತೀಶ ನಾಯ್ಕ ಜಿ, ಹೆಚ್ ಸಿ ವಿಜು, ಎಚ್ ಸಿ ರವೀಂದ್ರ, ಎಚ್ ಸಿ ಕೃಷ್ಣಪ್ಪ, ಮತ್ತು ಜಿಲ್ಲಾ ಗಣಕಯಂತ್ರದ ವಿಭಾಗದ ಸಂಪತ್ ಮತ್ತು ದಿವಾಕರರವರು ಭಾಗವಹಿಸಿದ್ದರು.

- Advertisement -

Related news

error: Content is protected !!