Friday, June 19, 2026
spot_imgspot_img
spot_imgspot_img

ಧಾರ್ಮಿಕ ಕ್ಷೇತ್ರಗಳಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದ ದೇವದಾಸ್ ಮನೆಗೆ ಕಲ್ಲು ತೂರಾಟ!!

- Advertisement -
- Advertisement -
suvarna gold

ಉಳ್ಳಾಲ: ಧಾರ್ಮಿಕ ಕ್ಷೇತ್ರಗಳಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದ ಆರೋಪಿ ದೇವದಾಸ್ ದೇಸಾಯಿ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಿನ್ನೆ ನಡೆದಿದೆ.

vtv vitla

ಕೊರಗಜ್ಜ ದೈವಕ್ಕೆ ಅಪಚಾರ ಎಸಗುತ್ತಿದ್ದ ಆರೋಪಿ ದೇವದಾಸ್ ಬಂಧನವಾಗುತ್ತಿದ್ದಂತೆ ಮಿತ್ರನಗರದಲ್ಲಿರುವ ದೇವದಾಸ್ ಮನೆಗೆ ಹಿಂದು ಕಾರ್ಯಕರ್ತರು ಕಲ್ಲೆಸೆದಿದ್ದು ಮನೆಯ ಆವರಣ ಗೋಡೆಯ ಸಿಮೆಂಟ್ ನಿರ್ಮಿತ ಗೋಲದ ಆಕೃತಿಯನ್ನ ಪುಡಿಗೈದಿದ್ದಾರೆ.

ಇದನ್ನೂ ಓದಿ: ಮಂಗಳೂರು: ಕೊರಗಜ್ಜನ ಕಟ್ಟೆ ಅಪವಿತ್ರಗೊಳಿಸಿದ ಪ್ರಕರಣ; ಓರ್ವ ಪೊಲೀಸರ ವಶಕ್ಕೆ!

ವಿಷಯ ತಿಳಿಯುತ್ತಿದ್ದಂತೆ ಉಳ್ಳಾಲ ಪೊಲೀಸ್ ಠಾಣಾ ಪಿಐ ಸಂದೀಪ್, ಪಿಎಸ್ ಐ ಪ್ರದೀಪ್ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಆರೋಪಿ ದೇವದಾಸ್ ಮನೆಗೆ ಬಂದೋಬಸ್ತ್ ನೀಡಿದ್ದಾರೆ. ಆರೋಪಿ ದೇವದಾಸನ ಮಹಜರಿಗಾಗಿ ಮನೆಗೆ ಕರೆತರುವ ಬಗ್ಗೆ ಸ್ಥಳೀಯರಿಗೆ ತಿಳಿದಿದ್ದು, ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು ಪೊಲೀಸರು ಎಲ್ಲರನ್ನೂ ಚದುರಿಸಿದ್ದಾರೆ.

- Advertisement -

Related news

error: Content is protected !!