Sunday, June 14, 2026
spot_imgspot_img
spot_imgspot_img

ಧೈರ್ಯದಿಂದ ಹೇಳುತ್ತೇನೆ, ನನಗೆ ಮುಸ್ಲಿಂ ಮತಗಳು ಬೇಡ; ಶಾಸಕ ಹರೀಶ್ ಪೂಂಜಾ

- Advertisement -
- Advertisement -

ಬೆಳ್ತಂಗಡಿ: ನನಗೆ ಮುಸ್ಲಿಂ ಮತಗಳು ಬೇಡ ಹಿಂದೂಗಳ ಮತವೇ ಸಾಕು ಎಂದು ಶಾಸಕ ಹರೀಶ್ ಪೂಂಜಾ ವೇದಿಕೆ ಒಂದರಲ್ಲಿ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಮಾನಾಡುತ್ತಾ ಶಾಸಕ ಹರೀಶ್ ಪೂಂಜ ಮುಂದಿನ ಚುನಾವಣೆಗೆ ಸಂಘದ ಹಿರಿಯರು ನನ್ನನ್ನು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಚಿಸಿದರೆ ನಾನು ಧೈರ್ಯದಿಂದ ಹೇಳುತ್ತೇನೆ, ನನಗೆ ಮುಸ್ಲಿಂ ಮತಗಳು ಬೇಡ ಹಿಂದೂಗಳ ಮತಗಳು ಸಾಕು ಎಂದು. ಯಾಕೆಂದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು, ಕಾಶಿಯಲ್ಲಿ ಕಾಶಿ ವಿಶ್ವನಾಥ ದೇವರ ಮಂದಿರ ಆಗಬೇಕು, ದತ್ತಪೀಠದಲ್ಲಿ ದತ್ತಾತ್ರೇಯನ ಮಂದಿರ ನಿರ್ಮಾಣ ಆಗಬೇಕು, ಎಂದಿದ್ದಾರೆ.

ಸದ್ಯ ಭಾಷಣದ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಕಾರಣವಾಗಿದೆ.

- Advertisement -

Related news

error: Content is protected !!