Saturday, May 11, 2024
spot_imgspot_img
spot_imgspot_img

ನಕಲಿ ಮಾರ್ಕ್ಸ್ ಕಾರ್ಡ್ ತಯಾರಿಕೆ ಬೃಹತ್ ಜಾಲ ಬೆಳಕಿಗೆ; 6800 ಮಾರ್ಕ್ಸ್ ಕಾರ್ಡ್‌ಗಳು ಪತ್ತೆ..!!

- Advertisement -G L Acharya panikkar
- Advertisement -
vtv vitla

ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್‌ ತಯಾರಿಕೆಯ ಬೃಹತ್ ಜಾಲ ಬೆಳಕಿಗೆ ಬಂದಿದ್ದು,, ಎಲ್ಲಾ ವಿಶ್ವವಿದ್ಯಾಲಯಗಳು ಬೆಚ್ಚಿ ಬೀಳುವಂತೆ ಮಾಡಿದೆ.

ಈ ಪ್ರಕರಣ ಕುರಿತಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದು ‘ಒಂದೂವರೆ ತಿಂಗಳ ಹಿಂದೆ ನಕಲಿ ಮಾರ್ಕ್ಸ್ ಕಾರ್ಡ್ ದಂಧೆಯನ್ನ ಸಿಸಿಬಿ ಪತ್ತೆ ಮಾಡಿತ್ತು.

ಇದರ ಮುಂದುವರೆದ ಭಾಗವಾಗಿ ಸಿಸಿಬಿ ಕಾರ್ಯಾಚಾರಣೆ ಮಾಡಿತ್ತು. ಇದೇ ರೀತಿ ನಕಲಿ ಮಾರ್ಕ್ಸ್ ಮಾಡುತ್ತಿದ್ದ ಐದು ಸಂಸ್ಥೆಗಳ ವಿರುದ್ದ. ಸಿಸಿಬಿ ದಾಳಿ ಮಾಡಿತ್ತು. ಈ ವೇಳೆ 6800 ನಕಲಿ ಮಾರ್ಕ್ಸ್ ಕಾರ್ಡ್ ಪತ್ತೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

15 ವಿಶ್ವ ವಿದ್ಯಾಲಯ ಹಾಗೂ ಸಂಸ್ಥೆಗಳಿಗೆ ಸಂಬಂಧಿಸಿದ ಮಾರ್ಕ್ಸ್ ಕಾರ್ಡ್‌ಗಳಾಗಿದ್ದು ಒರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಯಾರಾದರು ಈ ರೀತಿಯ ನಕಲಿ ಮಾರ್ಕ್ಸ್ ಕಾರ್ಡ್ ಬಳಸುತ್ತಾ ಇದರೆ ಅವರಿಗೆ ಸಂಕಷ್ಟ ಎದುರಾಗಲಿದೆ. ಇಂತಹ ಸಂಸ್ಥೆಗಳಿಂದ ದೂರ ಇರಬೇಕು’ ಎಂದು ಸಾರ್ವಜನಿಕರಲ್ಲಿ ಕಮೀಷನರ್ ಮನವಿ ಮಾಡಿದ್ದಾರೆ. ಬೆಂಗಳೂರಿನ ಹಲವು ಕಾಲೇಜ್‌ಗಳ ಮೇಲೆ ದಾಳಿ ಮಾಡಿ ಸಿಸಿಬಿ ನಕಲಿ ‌ಮಾರ್ಕ್ಸ್ ಕಾರ್ಡ್ ತಯಾರಿಸುತ್ತಿದ್ದ ಬೃಹತ್ ಜಾಲ ಪತ್ತೆ ಮಾಡಿತ್ತು. ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಬರೋಬ್ಬರಿ 6800 ನಕಲಿ ಮಾರ್ಕ್ಸ್ ಕಾರ್ಡ್‌ಗಳು ಪತ್ತೆಯಾಗಿದ್ದು ಈ ವೇಳೆ ಕಂಪ್ಯೂಟರ್ , ಲ್ಯಾಪ್‌ಟಾಪ್ ಹಾಗೂ 13 ಮೊಬೈಲ್ ವಶಕ್ಕೆ ಪಡೆಯಲಾಗಿದೆ.

- Advertisement -

Related news

error: Content is protected !!