Friday, April 19, 2024
spot_imgspot_img
spot_imgspot_img

ನಡುರಸ್ತೆಯಲ್ಲೆ ವೃದ್ಧನ ಅಡ್ಡಗಟ್ಟಿ ದರೋಡೆ!

- Advertisement -G L Acharya panikkar
- Advertisement -

ದೆಹಲಿ: ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ 65 ವರ್ಷದ ವ್ಯಕ್ತಿಯ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡಿದ ದರೋಡೆಕೋರರು ಅವರ ಬಳಿಯಿದ್ದ ಹಣವನ್ನೆಲ್ಲ ದೋಚಿಕೊಂಡು ಓಡಿಹೋಗಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆ ವ್ಯಕ್ತಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಹಳ ದೂರ ಹಿಂಬಾಲಿಸಿದ ಇಬ್ಬರು ಅಪರಿಚಿತರು ಆ ವ್ಯಕ್ತಿಯ ಕುತ್ತಿಗೆಯನ್ನು ಹಿಡಿದು, ಆತನ ಕೈಲಿದ್ದ ಬ್ಯಾಗ್​ನೊಂದಿಗೆ ಪರಾರಿಯಾಗಿದ್ದಾರೆ.

ಬೆಳಗಿನ ಜಾವ 3.30ಕ್ಕೆ ರಾಮ್ ನಿವಾಸ್ ಎಂಬ ವ್ಯಕ್ತಿ ತನ್ನ ಮನೆಗೆ ನಡೆದುಕೊಂಡು ಹೋಗುವಾಗ ಅಪರಿಚಿತರು ದಾಳಿ ನಡೆಸಿದ್ದಾರೆ. ಅವರು ತಮ್ಮ ಮನೆ ತಲುಪುವ ಸ್ವಲ್ಪ ಹೊತ್ತಿನ ಮೊದಲು ಈ ಘಟನೆ ನಡೆದಿದೆ. ಹಿಂದಿನಿಂದ ಬಂದ ಇಬ್ಬರ ರಾಮ್ ಅವರ ಕುತ್ತಿಗೆಯನ್ನು ಹಿಡಿದು, ಅವರ ಕೈಲಿದ್ದ ಬ್ಯಾಗ್ ಕಸಿದುಕೊಂಡು ಓಡಿಹೋಗಿದ್ದಾರೆ.

ದರೋಡೆಕೋರರ ಕೈಯಿಂದ ಬಿಡಿಸಿಕೊಳ್ಳಲು ರಾಮ್ ಅವರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅವರನ್ನು ಕೆಳಗೆ ತಳ್ಳಿದ ದರೋಡೆಕೋರರು ಪರಾರಿಯಾಗಿದ್ದಾರೆ.

- Advertisement -

Related news

error: Content is protected !!