Friday, May 3, 2024
spot_imgspot_img
spot_imgspot_img

ನಡು ರಸ್ತೆಯಲ್ಲಿ ಪ್ರಿಯತಮೆಗೆ ಮುತ್ತಿನ ಸುರುಮಳೆಗೈದ ಯುವಕ; ವಿಡಿಯೋ ವೈರಲ್‌

- Advertisement -G L Acharya panikkar
- Advertisement -
vtv vitla

ಬೆಂಗಳೂರು: ಇತ್ತೀಚೆಗೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಯುವ ಜೋಡಿಯೊಂದು ಬೈಕ್ ಟ್ಯಾಂಕ್​ ಮೇಲೆ ಪ್ರೇಮಿಯನ್ನು ಕೂರಿಸಿಕೊಂಡು ಬೈಕಿನಲ್ಲಿ ರೊಮ್ಯಾನ್ಸ್ ಮಾಡುತ್ತಾ ಸಾಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇಂತಹದೇ ಘಟನೆಯೊಂದು ಆರ್‌ ಆರ್‌ ನಗರ ಮುಖ್ಯರಸ್ತೆಯಲ್ಲಿ ರಸ್ತೆಯಲ್ಲಿ ನಡೆದಿದೆ.

ನಗರದಲ್ಲಿ ಸಂಚಾರಿ ಪೊಲೀಸರ ಭಯವಿಲ್ಲದೇ ನಡು ರಸ್ತೆಯಲ್ಲೇ ಸ್ಕೂಟಿ ಮೇಲಿದ್ದ ಪ್ರೇಮಿಗಳಿಬ್ಬರು ರೊಮ್ಯಾನ್ಸ್ ಮಾಡಿರುವ ಘಟನೆ ಆರ್‌ ಆರ್‌ ನಗರ ಮುಖ್ಯರಸ್ತೆಯಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಹೆಲ್ಮೆಟ್ ಧರಿಸದೇ, ಸಂಚಾರಿ ನಿಯಮಗಳನ್ನೂ ಲೆಕ್ಕಿಸದೇ, ಕನಿಷ್ಠ ಸಾರ್ವಜನಿಕರ ಭಯವೂ ಇಲ್ಲದೇ ಸ್ಕೂಟರ್ ಚಲಾಯಿಸುತ್ತಿದ್ದ ಪ್ರಿಯತಮೆಗೆ ಪ್ರೇಮಿಯೊಬ್ಬ ಮುತ್ತಿನ ಸುರಿಮಳೆಗೈದಿದ್ದಾನೆ.

ಎರಡು ದಿನಗಳ ಹಿಂದೆ ಮೈಸೂರು ರಸ್ತೆಯ ನಾಯಂಡಹಳ್ಳಿ ಮೇಲ್ಸೇತುವೆ ಮೇಲೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರೇಮಿಗಳ ಹುಚ್ಚಾಟ ಸ್ಕೂಟರ್ ಹಿಂಬದಿಯಲ್ಲಿ ಸಾಗುತ್ತಿದ್ದ ಕಾರಿನಲ್ಲಿದ್ದ ಪ್ರಯಾಣಿಕರ‌ ಮೊಬೈಲ್​ನಲ್ಲಿ ಸೆರೆಯಾಗಿದೆ. ಬಳಿಕ ಎಚ್ಚೆತ್ತ ಪೊಲೀಸರು ರಸ್ತೆ ಸುರಕ್ಷತಾ ನಿಯಮ ಉಲ್ಲಂಘನೆಯಡಿ‌ ಪ್ರಕರಣ ದಾಖಲಿಸಿಕೊಂಡು, ಇಬ್ಬರ ಪೋಷಕರನ್ನೂ ಕರೆಯಿಸಿ ಕೌನ್ಸೆಲಿಂಗ್ ಮಾಡಿದ್ದಾರೆ.

- Advertisement -

Related news

error: Content is protected !!