Tuesday, April 30, 2024
spot_imgspot_img
spot_imgspot_img

ನಡೆದಾಡಲು ಪ್ರಾರಂಭಿಸಿದ ರಿಷಬ್‌ ಪಂತ್‌

- Advertisement -G L Acharya panikkar
- Advertisement -

ನವದೆಹಲಿ: ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಇದೀಗ ಚೇತರಿಕೆಯ ಹಂತದಲ್ಲಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ನಡೆದಾಡಲು ಆರಂಭಿಸಿದ್ದು ಅವರ ಪೋಟೊ ವೈರಲ್ ಆಗಿದೆ.

ಈ ಕುರಿತು ರಿಷಭ್ ಪಂತ್ ಅವರು ಟ್ವೀಟ್ ಮಾಡಿ ಪೋಟೊ ಹಂಚಿಕೊಂಡಿದ್ದು, ‘ಒಂದು ಹೆಜ್ಜೆ ಮುಂದಕ್ಕೆ, ಒಂದು ಹೆಜ್ಜೆ ದೃಢ, ಒಂದು ಹೆಜ್ಜೆ ಚೇತರಿಕೆಯತ್ತ’ ಎಂದು ಅಭಿಮಾನಿಗಳಿಗಾಗಿ ಸಂದೇಶ ಹಂಚಿದ್ದಾರೆ.

ಇನ್ನು 2022 ಡಿಸೆಂಬರ್ 30ರಂದು ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ತಮ್ಮ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಹೊಸ ವರ್ಷಾಚರಣೆಗಾಗಿ ಪಂತ್ ರೂರ್ಕಿಯಲ್ಲಿರುವ ಮನೆಗೆ ಪ್ರಯಾಣಿಸುತ್ತಿದ್ದಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದ್ದು, ಅಪಘಾತದಲ್ಲಿ ಪಂತ್ ಅವರ ತಲೆ, ಬೆನ್ನು, ಮಂಡಿ, ಕಾಲಿಗೆ ಗಾಯಗಳಾಗಿದ್ದವು.

- Advertisement -

Related news

error: Content is protected !!