Thursday, November 5, 2026
spot_imgspot_img
spot_imgspot_img

ಕಡಬ: ಬಾಡಿಗೆ ಹಣ ಕೇಳಿದ ಆಟೋ ಚಾಲಕನ ಮೇಲೆ ತಂಡದಿಂದ ಹಲ್ಲೆ – ಪ್ರಕರಣ ದಾಖಲು

- Advertisement -
- Advertisement -

ಕಡಬ: ಆಟೋ ಬಾಡಿಗೆ ಹಣ ಕೇಳಿದಕ್ಕೆ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಕುರಿಯಾಳಕೊಪ್ಪದಲ್ಲಿ ನಡೆದಿದೆ.

ಕಡಬ ಕೋಡಿಂಬಾಳ ನಿವಾಸಿ ಬೇಬಿಕೃಷ್ಣ (49) ಹಲ್ಲೆಗೊಳಗಾದ ಆಟೋ ಚಾಲಕ. ಇವರು ಕಡಬ 2ನೇ ಆಟೋ ರಿಕ್ಷಾ ಸ್ಟ್ಯಾಂಡ್‌ನಲ್ಲಿ ಬಾಡಿಗೆ ಮಾಡಿಕೊಂಡಿದ್ದಾರೆ.

ನ. 4 ರಂದು ರಾತ್ರಿ ಸ್ಟ್ಯಾಂಡ್‌ನಲ್ಲಿದ್ದಾಗ ಓರ್ವ ಅಪರಿಚಿತ ಹಿಂದಿ ಭಾಷಿಕ ವ್ಯಕ್ತಿ ಕುರಿಯಾಳಕೊಪ್ಪಕ್ಕೆ ಬಾಡಿಗೆಗೆ ಕರೆದಿದ್ದಾನೆ. ಆತನನ್ನು ಕರೆದುಕೊಂಡು ಕುರಿಯಾಳಕೊಪ್ಪಕ್ಕೆ ತೆರಳಿದಾಗ, ಬಾಡಿಗೆ ಹಣ ನೀಡುವುದಾಗಿ ಹೇಳಿ ಕಾಯಲು ಹೇಳಿ ಹೋಗಿದ್ದಾನೆ. ಬಾರದಿದ್ದಾಗ ಚಾಲಕ ಆತನಿದ್ದ ಟೆಂಟ್‌ಗೆ ತೆರಳಿ ಹಣ ಕೇಳಿದ್ದಾರೆ. ಈ ವೇಳೆ ಹಣ ನೀಡದೆ ಸತಾಯಿಸಿದ್ದು, ನಂತರ ಆರೋಪಿ ಹಾಗೂ ಇತರ 3-4 ಜನ ಸೇರಿ ರಿಕ್ಷಾ ಹೋಗದಂತೆ ತಡೆದು, ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 129/2026, ಕಲಂ 126(2), 115(2), r/w 3(5) BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!