Monday, June 8, 2026
spot_imgspot_img
spot_imgspot_img

ನದಿಯಲ್ಲಿ ಮುಳುಗಿ ತಂದೆ-ಮಗ ಸಾವು..!

- Advertisement -
- Advertisement -

ಕೊಡಗು: ಕಾವೇರಿ ನದಿಯಲ್ಲಿ ಮುಳುಗಿ ತಂದೆ-ಮಗ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಚಿಕ್ಕ ಬೆಟ್ಟಗೇರಿಯಲ್ಲಿ ನಡೆದಿದೆ. ಮಣಿಕಂಠ (47), ಪುತ್ರ ಪ್ರೀತಂ (15) ಮೃತ ದುರ್ದೈವಿಗಳು.

ಅಯ್ಯಪ್ಪಸ್ವಾಮಿ ಮಾಲಾಧಾರಿಯಾಗಿದ್ದ ತಂದೆ ಮಣಿಕಂಠ ಮಂಗಳವಾರ ರಾತ್ರಿ ಶಬರಿಮಲೆಗೆ ತೆರಳಬೇಕಿತ್ತು. ಸಂಜೆ ಸ್ನಾನಕ್ಕೆಂದು ಮಗನ ಜತೆಗೆ ನದಿಗೆ ಇಳಿದ ಸಂದರ್ಭದಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ಮಣಿಕಂಠ ಮೃತ ದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದಿದ್ದಾರೆ. ಬಾಲಕ ಪ್ರೀತಂ ಮೃತದೇಹಕ್ಕಾಗಿ ಶೋಧ ಮುಂದುವರಿದಿದೆ. ಸ್ಥಳಕ್ಕೆ ಕುಶಾಲನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!