Saturday, May 4, 2024
spot_imgspot_img
spot_imgspot_img

ಮಂಗಳೂರು: ಟಾರ್ಗೆಟ್ ಇಲ್ಯಾಸ್ ಹತ್ಯೆ ಪ್ರಕರಣ- 5 ಆರೋಪಿಗಳು ನಿರ್ದೋಷಿ ನ್ಯಾಯಾಲಯ ತೀರ್ಪು

- Advertisement -G L Acharya panikkar
- Advertisement -

ಮಂಗಳೂರು: ಕುಖ್ಯಾತ ಟಾರ್ಗೆಟ್‌ ಗ್ಯಾಂಗ್‌ನ ನಾಯಕ ಟಾರ್ಗೆಟ್‌ ಇಲಿಯಾಸ್‌ ಜ.18 2018 ರಂದು ಮನೆಯಲ್ಲಿ ಹತ್ಯೆಯಾಗಿದ್ದರು. ಈ ಬಗ್ಗೆ ಪಾಂಡೇಶ್ವರ ರಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ತೀರ್ಪು ಹೊರಬಿದ್ದಿದ್ದು 5 ಆರೋಪಿಗಳನ್ನು ನಿರ್ದೋಷಿಗಳು ಎಂದು ಮಂಗಳೂರು ಮೂರನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶೆ ಸಂಧ್ಯಾ ತೀರ್ಪು ನೀಡಿದ್ದಾರೆ.

ಈ ಕೊಲೆಯಾಗುವ ವೇಳೆ ಮೊಹಮ್ಮದ್‌ ಇಲಿಯಾಸ್‌ ಮಂಗಳೂರು ಯೂತ್‌ ಕಾಂಗ್ರೇಸ್‌ನ ವಿಧಾನಸಭಾಕ್ಷೇತ್ರದ ಉಪಾಧ್ಯಕ್ಷರಾಗಿದ್ದರು ಹಾಗೂ ಯು.ಟಿ ಖಾದರ್‌ ಅವರ ಅಪ್ತರಾಗಿದ್ದರು. ಇಲ್ಯಾಸ್‌ ಮನೆಗೆ ನುಗ್ಗಿ ದಾವೂದ್‌ ಮೊಹಮ್ಮದ್‌ ಮತ್ತು ಶಮೀರ್‌ ಕೊಲೆ ಮಾಡಿರುವುದಾಗಿ ಇದನ್ನು ಇಲ್ಯಾಸ್‌ನ ಅತ್ತೆ , ಮೈದುನ ಕೊಲೆ ಮಾಡಿರುವುದನ್ನು ಕಣ್ಣಾರೆ ನೋಡಿರುವುದಾಗಿ ಸಾಕ್ಷಿ ನೀಡಿದ್ದಾರೆ.

ಆರೋಪಿಗಳ ಪರ ಹಾಜರಾದ ಕ್ರಿಮಿನಲ್‌ ವಕೀಲರಾದ ಜಿನೇಂದ್ರೆ ಕುಮಾರ್‌ ದಾವೂದ್‌ ಮತ್ತು ಶಮೀರ್‌ರನ್ನು ಸುಳ್ಳಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಹಾಗಾಗಿಯೇ ಆಸ್ಪತ್ರೆಯಲ್ಲಿ ದಾಖಲು ಮಾಡುವಾಗ ಕೊಂದವರು ಯಾರೆಂದು ತಿಳಿದಿಲ್ಲ ಎಂದು ದಾಖಲಿಸಿದ್ದರು ಎಂದು ವಾದ ಮಂಡಿಸಿದ್ದರು.
ಪೊಲೀಸ್‌ ಇಲಾಖೆ ಯಲ್ಲಿ ಕೂತೂಹಲ ಮೂಡಿಸಿದ ಈ ಪ್ರಕರಣದಲ್ಲಿ ತೀರ್ಪು ಹೊರಬಿದ್ದಿದ್ದು, ಆರೋಪಿಗಳನ್ನು ನಿರ್ದೋಷಿಗಳು ಎಂದು ಮಂಗಳೂರು ಮೂರನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶೆ ಸಂಧ್ಯಾ ತೀರ್ಪು ನೀಡಿದ್ದಾರೆ.

- Advertisement -

Related news

error: Content is protected !!