Monday, May 6, 2024
spot_imgspot_img
spot_imgspot_img

“ನನ್ನ ತಾಯಿ ತುಳುನಾಡಿನವರು”:- “ಧರ್ಮ ದೈವ” ತುಳು ಚಿತ್ರದ ಮೊದಲ ನೋಟ ಬಿಡುಗಡೆಗೊಳಿಸಿ ಹೇಳಿದ ಶ್ರೇಯಸ್ ಅಯ್ಯರ್

- Advertisement -G L Acharya panikkar
- Advertisement -

ಎರಡು ವರುಷ ಹಿಂದೆ ಕಿರು ಚಿತ್ರ ಮೂಲಕ ತುಳುನಾಡಿನಲ್ಲಿ ಹೊಸ ಸಂಚಲನ ಮೂಡಿಸಿದ್ದ ಧರ್ಮ ದೈವ ಕಿರು ಚಿತ್ರ ಇದೀಗ ಹೊಸ ಕಲಾವಿದರು,ಹೊಸ ಕಥೆ ಹೊಸ ತಂಡದ ಜೊತೆ ದೊಡ್ಡ ಪರದೆಯಲ್ಲಿ ಬರಲು ಸಿದ್ಧತೆ ನಡೆಯುತ್ತಿದೆ.

ನಿತಿನ್ ರೈ ಕುಕ್ಕುವಳ್ಳಿ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಮೊದಲ ನೋಟವನ್ನು ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ ಬಿಡುಗಡೆಗೊಳಿಸಿದ್ದಾರೆ.

“ನನ್ನ ಅಮ್ಮ ತುಳುನಾಡಿನವರು ” – ಶ್ರೇಯಸ್ ಅಯ್ಯರ್

“ಧರ್ಮ ದೈವ ತುಳು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಗೋಳಿಸಲು ಸಂತೋಷವಾಗುತ್ತಿದೆ. ದೈವಾರಾಧನೆ ಎಂಬುದು ತುಳುನಾಡಿನ ದೈವಿಕ ಶಕ್ತಿ. ತುಳು ಮತ್ತು ತುಳುನಾಡು ಜನತೆಯ ಪರವಾಗಿ ಈ ಚಿತ್ರದ ಮೊದಲ ನೋಟವನ್ನು ನಾನು ಬಿಡುಗಡೆಗೊಳಿಸುತ್ತಿದ್ದೇನೆ. ನನ್ನ ತಾಯಿ ಕೂಡ ತುಳುನಾಡಿನವರು”.

ಶ್ರೇಯಸ್ ಅಯ್ಯರ್ ಅವರ ತಾಯಿ ಬಂಟ ಸಮುದಾಯದವರಾದ ರೋಹಿಣಿ ಅಯ್ಯರ್ ಮೂಲತಃ ಕಿನ್ನಿಗೋಳಿಯವರು. ಇದೀಗ ಪತಿ ಸಂತೋಷ್ ಅಯ್ಯರ್ ಪುತ್ರ ಶ್ರೇಯಸ್ ಮತ್ತು ಪುತ್ರಿ ಶ್ರೇಷ್ಠ ಅವರ ಜೊತೆ ಮುಂಬೈ ಯಲ್ಲಿ ನೆಲೆಸಿದ್ದು ರೋಹಿಣಿ ಅಯ್ಯರ್ ಅವರು ಧರ್ಮ ದೈವ ಕಿರು ಚಿತ್ರವಾಗಿದ್ದಾಗ ಅದರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದರು.

ದೃಶ್ಯ ಮೂವೀಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಪುತ್ತೂರು ಮತ್ತು ಕೇರಳ ಗಡಿಭಾಗದಲ್ಲಿ ಬಹುತೇಕ ಚಿತ್ರೀಕರಣಗೊಳಿಸಿದ್ದು ತುಳು ಚಿತ್ರರಂಗದ ದಿಗ್ಗಜ ಕಲಾವಿದರು ಜೊತೆಗೆ ಹೊಸ ಪ್ರತಿಭೆಗಳು ಇದರಲ್ಲಿ ನಟಿಸಿದ್ದಾರೆ.

- Advertisement -

Related news

error: Content is protected !!