- Advertisement -
- Advertisement -

ನವದೆಹಲಿ: ಸಂಸತ್ತಿನಲ್ಲಿ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು, ನಮಗೆ ದೇಶ ಅನ್ನೋದು ಒಂದು ಜೀವಂತ ಆತ್ಮ ಎಂದರು. ಮೊದಲಿಗೆ ಕಾಂಗ್ರೆಸ್ ಟಾರ್ಗೆಟ್ ಮಾಡಿ, ಸಂಸದ ಕಾಲೆಳೆದ ಪ್ರಧಾನಿ ಮೋದಿಯವರು, ನಂತರ ದೇಶದ ಬಗ್ಗೆ ಮಾತಾಡಿದರು.

ನಾವು ಸಣ್ಣ ರೈತರನ್ನು ಬಲವರ್ಧನೆಗೊಳಿಸಬೇಕಿದೆ. ನಮ್ಮ ಮೊದಲ ಆದ್ಯತೆ ಸಣ್ಣ ರೈತರು. ಯಾರಿಗೆ ಸಣ್ಣ ರೈತರ ನೋವು ಗೊತ್ತಿಲ್ಲವೋ ಅವರಿಗೆ ಅನ್ನದಾತರ ಹೆಸರಿನಲ್ಲಿ ರಾಜಕೀಯ ಮಾಡುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.

ತೀವ್ರ ಕೊರೊನಾ ನಡುವೆಯೂ ಕೇಂದ್ರ ಸರ್ಕಾರ ದೇಶದ 80 ಕೋಟಿ ಜನರಿಗೆ ಉಚಿತ ರೇಷನ್ ನೀಡಲಾಗಿದೆ. ಇದು ನಮ್ಮ ಸರ್ಕಾರದ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದರು.


- Advertisement -