Tuesday, April 30, 2024
spot_imgspot_img
spot_imgspot_img

ಅತ್ತೆ ಮನೆಯಲ್ಲಿ ಕಿರುಕುಳ: ಬ್ಯಾಂಡ್, ವಾದ್ಯ, ಮೆರವಣಿಗೆಯೊಂದಿಗೆ ಮಗಳನ್ನು ತವರಿಗೆ ಕರೆತಂದ ಅಪ್ಪ..!

- Advertisement -G L Acharya panikkar
- Advertisement -

ಪತಿ ಮನೆಯಲ್ಲಿ ಕಿರುಕುಳಕ್ಕೋಳಗಾದ ಮಗಳನ್ನು ತಂದೆಯೊಬ್ಬ ಅದ್ದೂರಿಯಾಗಿ ಪಟಾಕಿ ಸಿಡಿಸಿ, ವಾದ್ಯ ಹಾಗೂ ಮೆರವಣಿಗೆ ಮೂಲಕ ಪತಿ ಮನೆಯಿಂದ ಕರೆತಂದ ವಿಡಿಯೋ ವೈರಲ್‌ ಆಗಿದೆ. ಆಗಿದೆ. ಈ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

ರಾಂಚಿಯ ಪ್ರೇಮ್ ಗುಪ್ತಾ ತಮ್ಮ ಮಗಳು ಸಾಕ್ಷಿಯನ್ನು 2020ರ ಏಪ್ರಿಲ್ ತಿಂಗಳಲ್ಲಿ ಜಾರ್ಖಂಡ್ ವಿದ್ಯುತ್ ವಿತರಣಾ ನಿಗಮದಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಚಿನ್ ಕುಮಾರ್‌ಗೆ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.

ಮದುವೆಯಾದ ಸ್ವಲ್ಪ ದಿನಗಳಲ್ಲೇ ನನ್ನ ಮಗಳಿಗೆ ಆಕೆಯ ಗಂಡನ ಮನೆಯವರು ಕಿರುಕುಳ ನೀಡಲು ಶುರು ಮಾಡಿದ್ದರು. ಅಲ್ಲದೇ ಮನೆಯಿಂದ ಹೊರ ಹಾಕಲು ಪ್ರಯತ್ನ ಮಾಡುತ್ತಿದ್ದರು. ಆದರೆ ಮದುವೆಯಾಗಿ ವರ್ಷ ಕಳೆಯುವ ವೇಳೆ ಸಚಿನ್‌ ಕುಮಾರ್‌ಗೆ ಈಗಾಗಲೇ ಎರಡು ಮದುವೆಯಾಗಿರುವುದು ತಿಳಿದು ಬಂತು. ಹೀಗಾಗಿ ಮಗಳು ಈ ಸಂಬಂಧದಿಂದ ಹೊರಗೆ ಬರಲು ಬಯಸಿದಳು ಎಂದು ಪ್ರೇಮ್ ಗುಪ್ತಾ ಹೇಳಿದ್ದಾರೆ.

ಮದುವೆ ಬಳಿಕ ಸಂಗಾತಿ ಮತ್ತು ಅವರ ಕುಟುಂಬದವರು ಆಕೆಗೆ ಕಷ್ಟ ನೀಡಲು ಪ್ರಾರಂಭಿಸಿದರೆ, ನಿಮ್ಮ ಮಗಳನ್ನು ಅತ್ಯಂತ ಗೌರವದಿಂದ ಮನೆಗೆ ಕರೆದುಕೊಂಡು ಬರಬೇಕು. ಯಾಕೆಂದರೆ ಎಲ್ಲಾ ಹೆಣ್ಣು ಮಕ್ಕಳು ಅಮೂಲ್ಯ ಎಂದು ಭಾವನಾತ್ಮಕವಾಗಿ ಪ್ರೇಮ್ ಗುಪ್ತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

- Advertisement -

Related news

error: Content is protected !!