Friday, April 19, 2024
spot_imgspot_img
spot_imgspot_img

ನಮೀಬಿಯಾದಿಂದ ಭಾರತಕ್ಕೆ ತಂದ ಚೀತಾಗಳ ಪೈಕಿ ಕಿಡ್ನಿ ಸಮಸ್ಯೆಗೆ ತುತ್ತಾದ ಹೆಣ್ಣು ಚೀತಾ

- Advertisement -G L Acharya panikkar
- Advertisement -

ಭಾರತದ ಪಾಲಿಗೆ ಅತ್ಯಾಪರೂಪ ಹುಲಿ ಸಂತತಿಯಾಗಿದ್ದ ಚೀತಾಗಳನ್ನು ಕಳೆದ ವರ್ಷ ನಮೀಬಿಯಾದಿಂದ ಭಾರತಕ್ಕೆ ಕರೆತರಲಾಗಿತ್ತು. ಎಂಟು ಚೀತಾಗಳ ಪೈಕಿ ಒಂದು ಹೆಣ್ಣು ಚೀತಾ ಆನಾರೋಗ್ಯಕ್ಕೆ ತುತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರೆತಂದ ಎಂಟು ಚೀತಾಗಳ ಪೈಕಿ ಸಶಾ ಹೆಸರಿನ ಒಂದು ಚೀತಾ ಮೂತ್ರಪಿಂಡ (ಕಿಡ್ನಿ) ಸೋಂಕಿನಿಂದ ಬಳಲುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಏಷ್ಯಾಟಿಕ್ ಚಿರತೆಗಳ ಸಂತತಿ ಅಂತ್ಯಗೊಂಡ 70 ವರ್ಷಗಳ ನಂತರ ಭಾರತಕ್ಕೆ 08 ಚೀತಾಗಳನ್ನು ತರಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದಂದು ನಮೀಬಿಯಾದಿಂದ ಕರೆತರಲಾಯಿತು. ನಂತರ ಅವುಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬೀಡಲಾಗಿತ್ತು.

ಎಂದಿನಂತೆ ಅಧಿಕಾರಿಗಳುದೈನಂದಿನ ಮೇಲ್ವಿಚಾರಣೆ ನಡೆಸಿದಾಗ ನಶಾ ಹೆಸರಿನ ಹೆಣ್ಣು ಚೀತಾ ಆಯಾಸಗೊಂಡ ಸ್ಥಿತಿಯಲ್ಲಿರುವ ಕಂಡು ಬಂದಿದೆ. ತಡ ಮಾಡದ ಅಧಿಕಾರಿಗಳು ಕೂಡಲೇ ಟ್ರಾನ್ಸ್‌ಕ್ವಿಲೈಸ್ ಮಾಡಿ ಕ್ವಾರಂಟೈನ್‌ ಆವರಣಕ್ಕೆ ಬಿಟ್ಟಿದ್ದಾರೆ. ತಜ್ಞವೈದ್ಯರು ಆರೋಗ್ಯ ತಪಾಸಣೆ ಮಾಡಿದ್ದು, ಈ ವೇಳೆ ಸಶಾ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದೆ ಎಂಬುದು ಗೊತ್ತಾಗಿದೆ.

ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು, ತಜ್ಞ ವೈದ್ಯರು ಸಶಾ ಮೇಲೆ ಈಗ ನಿಗಾ ಇಟ್ಟಿದ್ದಾರೆ. ಈ ಒಂದು ಚೀತಾ ಬಿಟ್ಟು ಉಳಿದ ಏಳು ಚೀತಾಗಳು ಚೆನ್ನಾಗಿವೆ ಎಂದು ತಿಳಿದು ಬಂದಿದೆ. ಹೆಣ್ಣು ಚೀತಾಗೆ ಅನಾರೋಗ್ಯ ವಿಚಾರ ಗೊತ್ತಾಗುತ್ತಿದ್ದಂತೆ ಭೋಪಾಲ್‌ನ ವಾನ್ ವಿಹಾರ್‌ನಿಂದ ಡಾ.ಅತುಲ್ ಗುಪ್ತಾ ನೇತೃತ್ವದ ವೈದ್ಯರ ತಂಡವು ಉದ್ಯಾನಕ್ಕೆ ದೌಡಾಯಿಸಿದೆ. ಚಿಕಿತ್ಸೆಗಾಗಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ವನ್ಯಜೀವಿ ತಜ್ಞರನ್ನೂ ಸಂಪರ್ಕಿಸಲಾಗಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯಾಧಿಕಾರಿಗಳು ಹೇಳಿದರು.

ಮೈಮೇಲೆಲ್ಲ ಕಪ್ಪು ಮಚ್ಚೆ ಗುರುತಿನ ಈ ಚೀತಾಗಳ ಸಂತತಿ ಭಾರತದಲ್ಲಿ 70 ವರ್ಷದ ಹಿಂದೆಯೇ ನಾಶವಾಗಿದೆ. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು ಎಂದು ವರದಿ ತಿಳಿಸಿದೆ. 1952ರಲ್ಲಿ ಈ ಚೀತಾ ಪ್ರಭೇದ ಭಾರತದಲ್ಲಿ ಇಲ್ಲ ಎಂದು ಘೋಷಿಸಲಾಗಿತ್ತು.

- Advertisement -

Related news

error: Content is protected !!