Friday, May 3, 2024
spot_imgspot_img
spot_imgspot_img

ನವ ಮಂಗಳೂರು ಬಂದರಿಗೆ ಎರಡನೇ ಐಷಾರಾಮಿ ಹಡಗು “SEVEN SEAS EXPLORER” ಆಗಮನ

- Advertisement -G L Acharya panikkar
- Advertisement -

ಮಂಗಳೂರು: ಒಂದೇ ವಾರದ ಅಂತರದಲ್ಲಿ ನವ ಮಂಗಳೂರು ಬಂದರಿಗೆ ಇನ್ನೊಂದು ಐಷಾರಾಮಿ ಹಡಗು ಆಗಮಿಸಿದೆ. ಸೆವೆನ್ ಸೀಸ್ ಎಕ್ಸ್ ಫ್ಲೋರರ್ ಎಂಬ ಈ ಐಷಾರಾಮಿ ಹಡಗು ಮಾರ್ಷಲ್ ಐಲ್ಯಾಂಡ್​ನಿಂದ ಆಗಮಿಸಿದೆ.

ನವೆಂಬರ್​ 28 ರಂದು ಐಷಾರಾಮಿ ಹಡಗು ಮಂಗಳೂರಿಗೆ ಆಗಮಿಸಿತ್ತು. ಇದಾದ ಬಳಿಕ ಶುಕ್ರವಾರ ನವ ಮಂಗಳೂರು ಬಂದರಿಗೆ ಎರಡನೇ ಐಷಾರಾಮಿ ಪ್ರಯಾಣಿಕ ಹಡಗು ಆಗಮಿಸಿದೆ.

ಈ ಹಡಗಿನಲ್ಲಿ 686 ಮಂದಿ ಪ್ರಯಾಣಿಕರು ಹಾಗೂ 552 ಸಿಬ್ಬಂದಿ ಮಂಗಳೂರಿಗೆ ಆಗಮಿಸಿದ್ದಾರೆ. ಸೆವೆನ್ ಸೀಸ್ ಎಕ್ಸ್ ಫ್ಲೋರರ್ ಹಡಗು ಇದಾಗಿದ್ದು, 223.74 ಮೀ. ಉದ್ದ ಹಾಗೂ 48 ಮೀ. ಅಗಲವಿದೆ. ನಿನ್ನೆ ಬೆಳಗ್ಗೆ 7 ಗಂಟೆಗೆ ಈ ಹಡಗು ನವ ಮಂಗಳೂರು ಬಂದರಿಗೆ ಆಗಮಿಸಿದೆ.

ಈ ಐಷಾರಾಮಿ ಹಡಗು ಮಾಲೆ (ಮಾಲ್ಡೀವ್ಸ್)ಗೆ ಹೋಗುವ ಮಾರ್ಗದಲ್ಲಿ ಕತಾರ್ ಬಂದರಿನಿಂದ ಭಾರತಕ್ಕೆ ಬಂದು ಮೊರ್ಮಗೋವಾಕ್ಕೆ ಆಗಮಿಸಿತ್ತು. ಅಲ್ಲಿಂದ ಹೊರಟ ಈ ಐಷಾರಾಮಿ ಹಡಗು ನವ ಮಂಗಳೂರು ಬಂದರಿಗೆ ನಿನ್ನೆ ಬೆಳಗ್ಗೆ ಬಂದು ತಲುಪಿದೆ.

ಈ ಹಡಗಿನ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ನವ ಮಂಗಳೂರು ಬಂದರು ಅಧಿಕಾರಿಗಳು ಭವ್ಯವಾಗಿ ಸ್ವಾಗತ ಕೋರಿ ಪ್ರಯಾಣಿಕರ ಸೌಲಭ್ಯಕ್ಕೆ ಸಕಲ ಸಿದ್ಧತೆ ಮಾಡಿದ್ದರು. ಹಡಗಿನಿಂದ ಇಳಿದ ಪ್ರಯಾಣಿಕರಿಗೆ ಮಂಗಳೂರು ನಗರದ ಕುದ್ರೋಳಿ ಶ್ರೀಕ್ಷೇತ್ರ, ಕದ್ರಿ ದೇವಾಲಯ, ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿಯ ಫಿಲಾಟೆಲಿಕ್ ಬ್ಯೂರೋ‌, ಸಂತ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ, ಗೋಡಂಬಿ ಕಾರ್ಖಾನೆ, ಗೋಮಟೇಶ್ವರ ಪ್ರತಿಮೆ, ಮೂಡಬಿದ್ರಿಯ ಸಾವಿರಕಂಬದ ಬಸದಿಯ ವೀಕ್ಷಣೆಗೆ ಬಸ್, ಕಾರು, ಪ್ರೀಪೇಯ್ಡ್​ ಟ್ಯಾಕ್ಸಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಬಳಿಕ ಈ ಹಡಗು ಸಂಜೆ 6 ಗಂಟೆಗೆ ಮಾಲ್ಡೀವ್ಸ್​ನ ಮಾಲೆ ಬಂದರಿನತ್ತ ಪ್ರಯಾಣ ಬೆಳೆಸಿತು.

- Advertisement -

Related news

error: Content is protected !!