Sunday, June 14, 2026
spot_imgspot_img
spot_imgspot_img

ನಾಪತ್ತೆಯಾಗಿದ್ದ  8 ವರ್ಷದ ಬಾಲಕನ ಶವ ನಿರ್ಜನ ಪ್ರದೇಶದಲ್ಲಿ ಪತ್ತೆ; ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ

- Advertisement -
- Advertisement -
vtv vitla

ಹುಬ್ಬಳ್ಳಿ: ಪಾಳು ಬಿದ್ದ ನಿರ್ಜನ ಜಾಗದಲ್ಲಿ ಎಂಟು ವರ್ಷದ ಬಾಲಕನೊಬ್ಬನ ಶವ ಪತ್ತೆಯಾಗಿದ್ದ ಘಟನೆ ಹುಬ್ಬಳ್ಳಿಯ ದೊಡ್ಡ ಮನಿ ಕಾಲೊನಿಯಲ್ಲಿ ನಡೆದಿದ್ದು, ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ನದೀಮ್ ಹಸನಸಾಬ್ ಹುಬ್ಬಳ್ಳಿ (8) ಮೃತ ಬಾಲಕ. ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದ ಈ ಹುಡುಗನಿಗಾಗಿ ಎಲ್ಲ ಕಡೆ ಹುಡುಕಾಟ ನಡೆದಿತ್ತು. ಬಳಿಕ ಪೋಷಕರು ಪೊಲೀಸರಿಗೂ ದೂರು ನೀಡಿದ್ದರು. ಆದರೆ, ಎಲ್ಲೂ ಆತ ಪತ್ತೆಯಾಗಿರಲಿಲ್ಲ.

ಶುಕ್ರವಾರ ಕುರುಚಲು ಗಿಡಗಳಿರುವ ನಿರ್ಜನ ಪ್ರದೇಶದಲ್ಲಿ ಆತನ ಶವ ಪತ್ತೆಯಾಗಿದ್ದು, ಹಲವು ಸಂಶಯಗಳನ್ನು ಹುಟ್ಟುಹಾಕಿದೆ.

ಮೂರನೇ ತರಗತಿಯಲ್ಲಿ ಓದುತ್ತಿರುವ ಈ ಹುಡುಗನಿಗೆ ಶಾಲೆಗೆ ರಜೆ ಸಿಕ್ಕಿದೆ. ಹೀಗಾಗಿ ಆತ ಘಂಟಿಕೇರಿಯಲ್ಲಿರುವ ಅಜ್ಜಿ‌ ಮನೆಗೆ ಬಂದಿದ್ದ. ಸಂಜೆಯವರೆಗೂ ಆಟವಾಡುತ್ತಿದ್ದ ಆತ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದ. ಶುಕ್ರವಾರ ಮನೆಯಿಂದ ಸ್ವಲ್ಪ ದೂರದಲ್ಲಿರುವ ದೊಡ್ಡಮನಿ ಕಾಲನಿಯ ಪಾಳುಬಿದ್ದ ಜಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತಪಡಿಸಲಾಗುತ್ತಿದೆಯಾದರೂ ಇಷ್ಟು ಸಣ್ಣ ಹುಡುಗನನ್ನು ಯಾಕೆ ಕೊಲೆ ಮಾಡಿದರು ಎಂಬ ಸಂಶಯವಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!