Sunday, June 14, 2026
spot_imgspot_img
spot_imgspot_img

ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಜೂ.30 ರೊಳಗೆ ಶರಣಾಗತಿಗೆ ಎ‌ನ್‌ಐಎ ನ್ಯಾಯಾಲಯ ಆದೇಶ; ತಪ್ಪಿದ್ದಲ್ಲಿ ಆರೋಪಿಗಳ ಮನೆ ಜಪ್ತಿ : ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ಮೈಕ್ ಅನೌನ್ಸ್

- Advertisement -
- Advertisement -

ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಜೂ.30 ರೊಳಗೆ ಶರಣಾಗದೇ ಇದ್ದಲ್ಲಿ ಅವರ ಮನೆ ಹಾಗೂ ಆಸ್ತಿ ಮುಟ್ಟುಗೋಲು ಮಾಡಲಾಗುವುದೆಂದು ಎನ್‌ಐಎ ನ್ಯಾಯಾಲಯ ಆದೇಶ ಈ ಕುರಿತು ಸುಳ್ಯ ನಗರದಲ್ಲಿ ಎನ್‌ಐಎ ಅಧಿಕಾರಿಗಳು ಧ್ವನಿವರ್ಧಕದ ಮೂಲಕ ಉದ್ಘೋಷಣೆ ಮಾಡಿದ್ದಾರೆ.

ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಾರ್ವಜನಿಕರಲ್ಲಿ ವಿನಂತಿಸಲಾಗುತ್ತಿದೆ. ತಲೆಮರೆಸಿಕೊಂಡಿರುವ ಆರೋಪಿಗಳಾದ ಉಮರ್ ಫಾರೂಕ್ ಹಾಗೂ ಮುಸ್ತಫಾ ಅವರ ಶರಣಾಗತಿಗೆ ಉದ್ಘೋಷಣೆ ಮಾಡಲಾಗುತ್ತಿದ್ದು ಆರೋಪಿಗಳ ಮನೆಗೆ ಎನ್‌ಐಎ ಅಧಿಕಾರಿಗಳು ತೆರಳಿ ನ್ಯಾಯಾಲಯದ ಆದೇಶ ಪ್ರತಿಯನ್ನು ಅಂಟಿಸಿದ್ದಾರೆ. ನಿನ್ನೆ ಬೆಳ್ಳಾರೆಯಲ್ಲಿಯೂ ಧ್ವನಿವರ್ಧಕದ ಮೂಲಕ ಎನ್‌ಐಎ ನ್ಯಾಯಾಲಯದ ಆದೇಶವನ್ನು ಉದ್ಘೋಷಣೆ ಮಾಡಿ ಆರೋಪಿ ಮನೆಗೆ ಹೋಗಿ ಆದೇಶ ಪ್ರತಿ ಅಂಟಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!