Thursday, July 23, 2026
spot_imgspot_img
spot_imgspot_img

ನೆಲ್ಲಿಕಾಯಿಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ..? ಬೇಸಿಗೆಯಲ್ಲಿ ಹೀಗೆ ಬಳಸಿ

- Advertisement -
- Advertisement -

ನೆಲ್ಲಿಕಾಯಿಯು ತನ್ನ ರೋಗ ನಿರೋಧಕ, ಕ್ಯಾನ್ಸರ್ ವಿರೋಧಿ ಮತ್ತು ಉರಿಯೂತವನ್ನು ಕಡಿಮೆಗೊಳಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಹೀಗಾಗಿಯೇ ಇದನ್ನು ಆರೋಗ್ಯಕರ ಎಂದು ಪರಿಗಣಿಸಲಾಗಿದೆ. ಈ ಬೇಸಿಗೆ ಕಾಲದಲ್ಲಿ ನೀವು ನೆಲ್ಲಿಕಾಯಿಯನ್ನು ಅನೇಕ ರೀತಿಯಲ್ಲಿ ಆಹಾರವಾಗಿ ಸೇವಿಸಬಹುದು. ಆ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ.

vtv vitla
vtv vitla

ಉಪ್ಪಿನಕಾಯಿ: ನೆಲ್ಲಿಕಾಯಿಯ ಉಪ್ಪಿನಕಾಯಿ ಬಹಳಷ್ಟು ಜನರಿಗೆ ಪ್ರಾಣ. ಇದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಇದರಲ್ಲಿರುವ ನಾರಿನಂಶವು ಮಲಬದ್ಧತೆ, ಅತಿಸಾರ ಮುಂತಾದ ಕಾಯಿಲೆಗಳಿಂದ ಪರಿಹಾರ ನೀಡುತ್ತದೆ.

ಕ್ಯಾಂಡಿ: ನೆಲ್ಲಿಕಾಯಿಯು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪರಿಣಾಮಕಾರಿ ಎಂದು 3 ಪರಿಗಣಿಸಲಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ನೆಲ್ಲಿಕಾಯಿ ಕ್ಯಾಂಡಿ ರೂಪದಲ್ಲಿ ಸೇವಿಸಬಹುದು.

ಚಟ್ನಿ: ಬೇಸಿಗೆ ಕಾಲದಲ್ಲಿ ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳಲು ನೆಲ್ಲಿಕಾಯಿ ಚಟ್ಟಿಯನ್ನೂ ಸೇವಿಸಬಹುದು. ಇದರಿಂದ ಮಾಡಿದ ಚಟ್ನಿಯನ್ನು ಸರಿಯಾಗಿ ಕಾಪಿಟ್ಟುಕೊಂಡರೆ ಬೇಗ ಕೆಡುವುದಿಲ್ಲ. ಈ ಚಟ್ನಿಯಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ನಿವಾರಿಸಿಕೊಳ್ಳಬಹುದು.

ಮುರಬ್ಬ: ನೆಲ್ಲಿಕಾಯಿಯನ್ನು ಜಾಮ್ ರೀತಿ ಮಾಡಿ ಅದನ್ನು ಸೇವಿಸಬಹುದು. ಇದು ಬೇಸಿಗೆಯಲ್ಲಿ ಉತ್ತಮವಾಗಿದೆ. ಇದರಲ್ಲಿರುವ ಅಂಶಗಳು ದೇಹವನ್ನು ತಂಪಾಗಿಸಲು ಕೆಲಸ ಮಾಡುತ್ತದೆ. ವಿಶೇಷತೆ ಏನೆಂದರೆ, ಇದರಲ್ಲಿರುವ ಫೈಟೊನ್ಯೂಟ್ರಿಯೆಂಟ್‌ಗಳು ಮೆದುಳಿನ ಕೋಶಗಳಿಗೆ ಹಾನಿ ಮಾಡುವ ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

vtv vitla
vtv vitla
- Advertisement -

Related news

error: Content is protected !!