Sunday, August 2, 2026
spot_imgspot_img
spot_imgspot_img

ನೇರಳಕಟ್ಟೆ : ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಮಸ್ಜಿದ್ ಹಾಗೂ ನೂರುಲ್ ಹುದಾ ಮದ್ರಸ ವತಿಯಿಂದ ಲೋಕಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮದಿನಾಚರಣೆ

- Advertisement -
- Advertisement -

ವಿಟ್ಲ: ನೇರಳಕಟ್ಟೆ ಸಮೀಪದ ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಮಸ್ಜಿದ್ ಹಾಗೂ ನೂರುಲ್ ಹುದಾ ಮದ್ರಸ ಇದರ ವತಿಯಿಂದ ಲೋಕಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮದಿನಾಚರಣೆ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಂಗಳವಾರ ಮಸೀದಿ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬರುಗಳಾದ ಹಾಜಿ ಪಿ.ಕೆ.ಆದಂ ದಾರಿಮಿ ಉದ್ಘಾಟಿಸಿದರು. ಅಬ್ದುಲ್ ಅಝೀಝ್ ದಾರಿಮಿ ಪೊನ್ಮಲ ಅಧ್ಯಕ್ಷತೆ ವಹಿಸಿದ್ದರು.

ಮಸೀದಿ ಅಧ್ಯಕ್ಷ ಪಿ.ಕೆ.ರಶೀದ್ ಪರ್ಲೊಟ್ಟು, ಕಾರ್ಯದರ್ಶಿ ಸಿದ್ದೀಕ್ ಪರ್ಲೊಟ್ಟು, ದ.ಕ.ಜಿಲ್ಲಾ ಮದ್ರಸ ಮೆನೇಜ್ಮೆಂಟ್ ನ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ, ಪಿ.ಕೆ.ಅಬ್ದುಲ್ ಖಾದರ್ ಪರ್ಲೊಟ್ಟು, ಹಾಜಿ ಉಮ್ಮರ್ ಫಾರೂಕ್ ಸುಲ್ತಾನ್, ಪಿ.ಕೆ ಅಬ್ಬಾಸ್ ಪರ್ಲೊಟ್ಟು, ಸಾಹುಲ್ ಹಮೀದ್, ಉಮ್ಮರ್ ಕುಂಞಿ, ಕೆ.ಬಿ.ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಇಲ್ಲಿನ ವಿಸ್ತರಿತ ಮಸೀದಿ ನಿರ್ಮಾಣ ಕಾರ್ಯದಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ 2020 – 21 ನೇ ಸಾಲಿನ ಅಧ್ಯಕ್ಷ ಕೆ.ಬಿ.ಖಾಸಿಂ ಹಾಜಿ ಮಿತ್ತೂರು, ಕಾರ್ಯದರ್ಶಿ ಪಿ.ಕೆ.ಝುಬೈರ್ ಪರ್ಲೊಟ್ಟು ಹಾಗೂ ಪಿ.ಕೆ ರಶೀದ್ ಅವರನ್ನು ಸನ್ಮಾನಿಸಲಾಯಿತು.

ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಮಸ್ಜಿದ್ ಖತೀಬ್ ಹೈದರಾಲಿ ಮುಸ್ಲಿಯಾರ್ ಸ್ವಾಗತಿಸಿ, ಇಸಾಕ್ ಕೌಸರಿ ವಂದಿಸಿದರು. ಶರೀಫ್ ಪರ್ಲೊಟ್ಟು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!