Friday, April 19, 2024
spot_imgspot_img
spot_imgspot_img

ನ. 19ಕ್ಕೆ ವರ್ಷದ ಅಂತಿಮ ಚಂದ್ರಗ್ರಹಣ; 600 ವರ್ಷಗಳ ನಂತರದ ವಿದ್ಯಾಮಾನ ಯಾವೆಲ್ಲಾ ಪ್ರದೇಶದಲ್ಲಿ ಗೋಚರಿಸುತ್ತದೆ.?

- Advertisement -G L Acharya panikkar
- Advertisement -

ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ್ 19 ರಂದು ಗೋಚರಿಸಲಿದೆ. ಕಾರ್ತಿಕ ಶುಕ್ಲ ಪಕ್ಷದ ಹುಣ್ಣಿಮೆಯಂದು ಈ ಚಂದ್ರಗ್ರಹಣ ಸಂಭವಿಸಲಿದೆ. ಧಾರ್ಮಿಕ ದೃಷ್ಟಿಯಿಂದ ಈ ಚಂದ್ರಗ್ರಹಣಕ್ಕೆ ವಿಶೇಷ ಮಹತ್ವವಿದೆ. ಇದು ಕೇವಲ ರಾಶಿಚಕ್ರದ ಮೇಲೆ ತನ್ನ ಪ್ರಭಾವವನ್ನು ಮಾತ್ರ ತೋರಿಸದೆ, 600 ವರ್ಷಗಳ ನಂತರ ಈ ವಿದ್ಯಾಮಾನ ಗೋಷಚರಿಸಲಿದೆ. ಈ ಚಂದ್ರಗ್ರಹಣವನ್ನು ಭಾರತ ಸೇರಿದಂತೆ ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಏಷ್ಯಾದ ಕೆಲವು ಭಾಗ, ಆಸ್ಟ್ರೇಲಿಯಾ, ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರದ ಭಾಗಗಳಲ್ಲಿ ವಿಕ್ಷೀಸಬಹುದಾಗಿದೆ.

ನಾಸಾದ ಪ್ರಕಾರ, ನವೆಂಬರ್ 18 ಮತ್ತು 19 ರಂದು ರಾತ್ರಿ ಭಾಗಶಃ ಚಂದ್ರಗ್ರಹಣ ಗೋಚರಿಸುತ್ತಿದೆ. ಒಟ್ಟಾರೆ ಗ್ರಹಣ ಕಾಲವು ಮೂರು ಗಂಟೆ 28 ನಿಮಿಷ 24 ಸೆಕೆಂಡ್ ಇರಲಿದೆ. ಮಧ್ಯಾಹ್ನ 2.34ರ ವೇಳೆಗೆ ಶೇ. 97ರಷ್ಟು ಚಂದ್ರನ ಭಾಗವನ್ನು ಭೂಮಿಯ ನೆರಳು ಆವರಿಸಲಿದೆ. ಹವಾಮಾನಕ್ಕೆ ಅನುಗುಣವಾಗಿ ಯಾವುದೇ ಸ್ಥಳದಿಂದ ಗ್ರಹಣ ಗೋಚರಿಸಲಿದೆ. ಸಮಯ ಮತ್ತು ವಲಯವನ್ನು ಅವಲಂಬಿಸಿ ಸಂಜೆ ಮೊದಲು ಅಥವಾ ನಂತರ ಇದನ್ನು ನೋಡಬಹುದು.

ಭಾಗಶಃ ಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:48 ಕ್ಕೆ ಆರಂಭಗೊ0ಡು, ಸಂಜೆ 4:17 ಕ್ಕೆ ಕೊನೆಗೊಳ್ಳಲಿದೆ. ಗ್ರಹಣದ ಭಾಗಶಃ ಹಂತವು ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಈಶಾನ್ಯ ಭಾಗಗಳಲ್ಲಿ ಚಂದ್ರೋದಯದ ನಂತರ ಮುಕ್ತಾಯಗೊಳ್ಳಲಿದೆ ಎಂದು ಪಿಐಬಿ ತಿಳಿಸಿದೆ.

- Advertisement -

Related news

error: Content is protected !!