Sunday, May 19, 2024
spot_imgspot_img
spot_imgspot_img

ನ.29ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ; ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ ಸಾಧ್ಯತೆ

- Advertisement -G L Acharya panikkar
- Advertisement -

ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಲಿದ್ದು ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 28 (ಭಾನುವಾರ) ಸರ್ವಪಕ್ಷಗಳ ಸಭೆ (All-Party Meet) ನಡೆಸಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ. ಪಾರ್ಲಿಮೆಂಟ್​ನ ಚಳಿಗಾಲದ ಅಧಿವೇಶನ ನವೆಂಬರ್​ 29ರಿಂದ ಪ್ರಾರಂಭವಾಗಲಿದ್ದು, ಡಿಸೆಂಬರ್​ 23ಕ್ಕೆ ಮುಕ್ತಾಯವಾಗಲಿದೆ. ಅದಕ್ಕೂ ಮೊದಲು ಪ್ರಧಾನಮಂತ್ರಿ ಸರ್ವಪಕ್ಷಗಳ ಸಭೆಯ ನೇತೃತ್ವ ವಹಿಸಲಿದ್ದಾರೆ.

17ನೇ ಲೋಕಸಭೆಯ 7ನೇ ಅಧಿವೇಶನ ಸೋಮವಾರದಿಂದ ಪ್ರಾರಂಭವಾಗಲಿದೆ. ಸರ್ಕಾರಿ ಕೆಲಸಗಳ ಅಗತ್ಯತೆಗಳಿಗೆ ಒಳಪಟ್ಟು ಇರಲಿದ್ದು, ಡಿಸೆಂಬರ್​ 23ರಂದು ಮುಕ್ತಾಯಗೊಳ್ಳಲಿದೆ ಎಂದು ಲೋಕಸಭೆಯ ಸಚಿವಾಲಯ ತಿಳಿಸಿದೆ. ಇನ್ನು ರಾಜ್ಯಸಭೆಯಲ್ಲೂ ಕೂಡ ಅದೇ ಸಮಯದಲ್ಲಿ ಅಧಿವೇಶನ ಪ್ರಾರಂಭಗೊಳ್ಳಲಾಗಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೃಷಿ ಕಾಯ್ದೆಗಳ ವಿಚಾರ, ರೈತರ ಪ್ರತಿಭಟನೆ ವಿಷಯಗಳನ್ನು ಪ್ರಸ್ತಾಪ ಮಾಡುವ ಬಗ್ಗೆ ಪ್ರತಿಪಕ್ಷಗಳು ಸಿದ್ಧತೆ ನಡೆಸಿದ್ದರು. ಆದರೆ ಮೊನ್ನೆ ಶುಕ್ರವಾರ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೆ, ನವೆಂಬರ್​ 24ರಂದು ಅಂದರೆ ಚಳಿಗಾಲದ ಅಧಿವೇಶನ ಪ್ರಾರಂಭ ಆಗುವುದಕ್ಕೂ ಮೊದಲೇ ಅದನ್ನು ಸಂಸತ್ತಿನಲ್ಲಿಯೂ ರದ್ದುಗೊಳಿಸುವ ಸಾಧ್ಯತೆ ಹೆಚ್ಚಾಗಿದೆ. ಸಾಮಾನ್ಯವಾಗಿ ಪ್ರತಿ ಅಧಿವೇಶನಕ್ಕೂ ಮೊದಲು ಹೀಗೆ ಸರ್ವಪಕ್ಷಗಳ ಸಭೆ ನಡೆಯುತ್ತದೆ. ಅಧಿವೇಶನದಲ್ಲಿ ಸೌಹಾರ್ದಯುತವಾಗಿ ವರ್ತಿಸಬೇಕು..ಸಹಕಾರ ಕೊಡಬೇಕು ಎಂದು ಮನವಿ ಮಾಡುವ ನಿಟ್ಟಿನಲ್ಲಿ ಈ ಸಭೆ ನಡೆಯುತ್ತದೆ.

- Advertisement -

Related news

error: Content is protected !!