- Advertisement -
- Advertisement -
ನವದೆಹಲಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲಪದಕ ಬಂದಿದೆ. ಒಲಂಪಿಕ್ಸ್ನಲ್ಲಿ ಮಹಿಳಾ ವೇಯ್ಟ್ ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ.

ಈ ಹಿನ್ನೆಲೆ ಪ್ರಧಾನಿ ಟ್ವೀಟ್ ಮಾಡುವ ಮೂಲಕ ಮೀರಾಬಾಯಿ ಚಾನು ಅವರಿಗೆ ಶುಭಾಶಯ ಹೇಳಿದ್ದಾರೆ. ಟೋಕಿಯೋ 2020 ಪ್ರಾರಂಭಿಸಲು ಇದಕ್ಕಿಂತ ಖುಷಿಯಾದ ಪ್ರಾರಂಭ ಇನ್ನೇನು ಬೇಕು..? ಮೀರಾಬಾಯಿ ಚಾನು ಅವರ ಅತ್ಯದ್ಭುತ ಆಟದಿಂದ ಭಾರತ ಉಲ್ಲಸಿತಗೊಂಡಿದೆ.

ವೇಯ್ಟ್ ಲಿಫ್ಟಿಂಗ್ನಲ್ಲಿ ಬೆಳ್ಳಿ ಗೆದ್ದ ಅವರಿಗೆ ಶುಭಾಶಯಗಳು.. ಅವರ ಗೆಲುವು ಎಲ್ಲರನ್ನೂ ಉತ್ತೇಜಿಸುತ್ತದೆ ಎಂದಿದ್ದಾರೆ.


- Advertisement -








