Friday, March 29, 2024
spot_imgspot_img
spot_imgspot_img

ಪಂಜಾಬ್‌ ಗದ್ದುಗೆ ಏರಲಿದೆ ಆಮ್ ಆದ್ಮಿ ಪಾರ್ಟಿ..! 83 ಸ್ಥಾನಗಳನ್ನು ಖಾತರಿ ಪಡಿಸಿದ AAP

- Advertisement -G L Acharya panikkar
- Advertisement -

ಭಾರೀ ನಿರೀಕ್ಷೆ ಮೂಡಿಸಿರುವ ಪಂಚರಾಜ್ಯಗಳ ವಿಧಾನಸಭಾ ಕ್ಷೇತ್ರಯ ಮತ ಎಣಿಕೆ ಇಂದು ನಡೆಯುತ್ತಿದೆ. ಎಲ್ಲರ ಚಿತ್ತ ಪಂಚರಾಜ್ಯಗಳತ್ತ ಮೂಡಿದೆ. ಇನ್ನು ಪಂಚಾಬ್‌ ನಲ್ಲಿ ಬಿಜೆಪಿ ಭಾರೀ ಹಿನ್ನಡೆಯನ್ನು ಸಾಧಿಸಿದೆ. ಸಾಕಷ್ಟುರಾಜಕೀಯ ಹೈಡ್ರಾಮಗಳಿಗೆ ವೇದಿಕೆಯಾಗಿದ್ದ ಪಂಜಾಬ್‌ ಫಲಿತಾಂಶ ಸಹ ಸಾಕಷ್ಟುಕುತೂಹಲ ಕೆರಳಿಸಿದೆ.

ಪಂಜಾಬ್​ನ ಹಾಲಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಚರಣ್​ಜಿತ್ ಸಿಂಗ್ ಚನ್ನಿ ಭಾದೌರ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪಂಜಾಬ್​ನಲ್ಲಿ ಈವರೆಗಿನ ಮಾಹಿತಿ ಪ್ರಕಾರ ಕಾಂಗ್ರೆಸ್ 17, ಬಿಜೆಪಿ 7, ಆಪ್ 83, ಶಿರೋಮಣಿ ಅಕಾಲಿದಳ 10 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿವೆ. ಮಧ್ಯಾಹ್ನ 12ರ ವೇಳೆಗೆ ಫಲಿತಾಂಶದ ಸ್ಪಷ್ಟಚಿತ್ರಣ ಲಭಿಸುವ ಸಾಧ್ಯತೆ ಇದೆ.

ಕ್ಯಾಪ್ಟನ್ ಅಮರಿಂದರ್ ಸಿಂಗ್​ಗೆ ಹಿನ್ನಡೆ
ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮೊದಲ ಸುತ್ತಿನ ಮತಎಣಿಕೆಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಪಾಟಿಯಾಲ ಕ್ಷೇತ್ರದಲ್ಲಿ ಆಪ್​ನ ಅಜಿತ್​ಪಾಲ್ ಕೊಹ್ಲಿ ಮುನ್ನಡೆ ದಾಖಲಿಸಿದ್ದಾರೆ.

- Advertisement -

Related news

error: Content is protected !!