Tuesday, May 21, 2024
spot_imgspot_img
spot_imgspot_img

ಪಂಜಾಬ್ ನಿಂದ ಎಎಪಿ ರಾಜ್ಯಸಭಾ ಸದಸ್ಯತ್ವಕ್ಕೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮಪತ್ರ ಸಲ್ಲಿಕೆ

- Advertisement -G L Acharya panikkar
- Advertisement -

ನವದೆಹಲಿ: ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಐಐಟಿ ಪ್ರೊಫೆಸರ್ ಸಂದೀಪ್ ಪಾಠಕ್, ಶಿಕ್ಷಣ ತಜ್ಞ ಅಶೋಕ್ ಕುಮಾರ್ ಮಿತ್ತಲ್ ಮತ್ತು ದೆಹಲಿ ಶಾಸಕ ರಾಘವ್ ಚಡ್ಡಾ ಅವರು ಪಂಜಾಬ್‌ನಿಂದ ರಾಜ್ಯಸಭೆ ಅಥವಾ ಸಂಸತ್ತಿನ ಮೇಲ್ಮನೆಗೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಮನಿರ್ದೇಶಿತರಾಗಿದ್ದಾರೆ.

ಏಪ್ರಿಲ್ 9 ರಂದು ಐದು ರಾಜ್ಯಸಭಾ ಸ್ಥಾನಗಳು ತೆರವಾಗಲಿದ್ದು, ಮಾರ್ಚ್ 31 ರಂದು ಚುನಾವಣೆಗೆ ಹೆಸರುಗಳನ್ನು ಇಂದು ಸಲ್ಲಿಸಿದ್ದಾರೆ.

ಹರ್ಭಜನ್ ಸಿಂಗ್ ಎಎಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು ಮತ್ತು ಹಳದಿ ಪೇಟದಲ್ಲಿ ಕಾಣಿಸಿಕೊಂಡರು.

vtv vitla
vtv vitla

ಬೌಲಿಂಗ್ ದಂತಕಥೆಯಾಗಿ ಭಾರತವನ್ನು ಹೆಮ್ಮೆ ಪಡಿಸಿದ ನಂತರ, ಮಿಸ್ಟರ್ ಟರ್ಬನೇಟರ್ ಈಗ ಸಂಸತ್ತಿನಲ್ಲಿ ಪಂಜಾಬ್ ಜನರಿಗಾಗಿ ಧ್ವನಿ ಎತ್ತಲಿದ್ದಾರೆ ಎಂದು ಎಎಪಿ ಟ್ವೀಟ್ ಮಾಡಿದೆ.

ಚುನಾವಣೆಗೂ ಮುನ್ನ ಹರ್ಭಜನ್ ಸಿಂಗ್ ಅವರು ಪಂಜಾಬ್ ಕಾಂಗ್ರೆಸ್ ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರನ್ನು ಭೇಟಿಯಾಗಿದ್ದು, ಕಾಂಗ್ರೆಸ್ ಸದಸ್ಯರಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಾರೆ ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದ್ದರು. ಆದರೆ ಮಾಜಿ ಕ್ರಿಕೆಟಿಗ ಇದನ್ನು ನಿರಾಕರಿಸಿ ಎಎಪಿ ಸೇರಿದ್ದಾರೆ.

ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳ ಪೈಕಿ 92ರಲ್ಲಿ ಎಎಪಿ ಗೆದ್ದಿದೆ. ರಾಜ್ಯಸಭಾ ಚುನಾವಣೆಯ ನಂತರ ಮೇಲ್ಮನೆಯಲ್ಲಿ ಎಎಪಿ ಬಲ ಮೂರರಿಂದ ಎಂಟಕ್ಕೆ ಏರಲಿದೆ.

vtv vitla
vtv vitla
- Advertisement -

Related news

error: Content is protected !!