Tuesday, June 16, 2026
spot_imgspot_img
spot_imgspot_img

ಪಡುಬಿದ್ರಿ: ಬೈಕ್‌ಗೆ ಡಿಕ್ಕಿ ಹೊಡೆದ ಟ್ಯಾಂಕರ್‌..! ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು

- Advertisement -
- Advertisement -

ಬೈಕ್‌ಗೆ ಟ್ಯಾಂಕರ್‌ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಉಚ್ಚಿಲದಲ್ಲಿ ನಡೆದಿದೆ.

ಬೈಕ್‌ಗೆ ಹಿಂದಿನಿಂದ ವೇಗವಾಗಿ ಬಂದ ಟ್ಯಾಂಕರ್ ಢಿಕ್ಕಿ ಹೊಡೆದಾಗ ಓರ್ವ ಸವಾರನನ್ನು ಕೆಲವು ಮೀಟರ್ ದೂರದವರೆಗೆ ಎಳೆದೊಯ್ದು ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿ ನಿಂತಿದೆ.

ಮೃತರನ್ನು ಪಲಿಮಾರು ನಿವಾಸಿಗಳಾದ ಸುಬ್ರಮಣ್ಯ ಹಾಗೂ ಗಿರೀಶ ಎಂದು ಗುರುತಿಸಲಾಗಿದೆ. ಇವರಿಬ್ಬರು ಬೈಕಿನಲ್ಲಿ ಉಡುಪಿಯಿಂದ ಪಡುಬಿದ್ರಿಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪಡುಬಿದ್ರೆ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!