Monday, April 29, 2024
spot_imgspot_img
spot_imgspot_img

ಪುತ್ತೂರು: ಪ್ರತಿಷ್ಠಿತ ಬೋರ್ವೆಲ್ಸ್ ಸಂಸ್ಥೆಯ ಮಾಲಕಿಗೆ ಧಮ್ಕಿ, ಹಣಕ್ಕೆ ಬೇಡಿಕೆ..! ಕುಡಿಮೀಸೆಯ ಯುವಕನಿಂದ ಅಶ್ಲೀಲ ಪದ ಬಳಸಿ ನಿಂದನೆ, ಕೊಲೆ ಬೆದರಿಕೆ

- Advertisement -G L Acharya panikkar
- Advertisement -

ಪುತ್ತೂರು : ನಗರದಲ್ಲಿ ದಿನದಿಂದ ದಿನಕ್ಕೆ ಪುಂಡ ಯುವಕರ ಆಟಾಟೋಪ ಜಾಸ್ತಿಯಾಗುತ್ತಲೇ ಇದೆ. ಕುಡಿ ಮೀಸೆ ಚಿಗುರುವಾಗಲೇ ಯುವಕರು ನಾನು ಯಾರಿಗೂ ಕಡಿಮೆಯೇನಿಲ್ಲ ಎಂದು ತಮ್ಮ ಖದರ್‍ ತೋರಿಸುತ್ತಾರೆ. ಪುಡಿ ಹುಡುಗನೊಬ್ಬ ಯುವತಿಗೆ ಧಮ್ಕಿ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಅಷ್ಟು ಮಾತ್ರವಲ್ಲದೆ ಅಶ್ಲೀಲ ಪದ ಬಳಸಿ ಕೊಲೆ ಬೆದರಿಕೆಯೂ ಹಾಕಿದ್ದಾನೆ.

ಇಂತಹ ಒಂದು ಪ್ರಕರಣ ಪುತ್ತೂರಿನ ಮಹಿಳಾ ಠಾಣೆಯಲ್ಲಿ ವರದಿಯಾಗಿದೆ. ಪುತ್ತೂರಿನ ಪ್ರತಿಷ್ಠಿತ ಬೋರ್ವೆಲ್ಸ್ ಸಂಸ್ಥೆಯ ಮಾಲಕಿ ಒಬ್ಬರಿಗೆ ಹಣಕ್ಕೆ ಬೇಡಿಕೆಯಿಟ್ಟು, ಆಶ್ಲೀಲ ಪದ ಬಳಸಿ, ಕೊಲೆ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಈ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಮಾಲಕಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ:
ದಿನಾಂಕ : 16.04.2022 ಮಧ್ಯಾಹ್ನ ಸುಮಾರು 3.00 ಘಂಟೆಯ ಸಮಯಕ್ಕೆ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯನ್ನು ಸ್ವಚ್ಛಗೊಳಿಸುವ ಸೇವಾಕಾರ್ಯದಲ್ಲಿ ನಿರತರಾಗಿರುದ್ದ ಬೋರ್ವೆಲ್ಸ್ ಸಂಸ್ಥೆಯ ಮಾಲಕಿಗೆ ಮೂರು ಭಾರಿ ನಿತೇಶ್ ರೈ ಎಂಬವರು ಮೊಬೈಲ್ ಸಂಖ್ಯೆ 9632115854 ಯಿಂದ ಕರೆಮಾಡಿದ್ದಾನೆ. ಕರೆ ಮಾಡಿದ ನಿತೇಶ್ ಮಾಲಕಿಯನ್ನು ಉದ್ದೇಶಿಸಿ ಆಕೆಯ ಚಾತಿತ್ರ್ಯಕ್ಕೆ ಮಸಿ ಬಳಿಯುವ ರೀತಿಯಲ್ಲಿ ತುಳುಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ, ಚಾರಿತ್ರ್ಯ ಹರಣ ಇತ್ಯಾದಿ ಮಾಡಿರುತ್ತಾನೆ. ಹಾಗೂ ಮಾತನಾಡಲು ನಿರಾಕರಿಸಿದರೂ ಮತ್ತೂ ಮತ್ತೂ ಒತ್ತಯಾ ಪೂರ್ವಕವಾಗಿ ಮಾತನಾಡಲು ಮುಂದಾಗಿದ್ದ..!

ಈ ಸಂದರ್ಭದಲ್ಲಿ ಫೋನ್ ಲೌಡ್ ಸ್ಪೀಕರ್ ನಲ್ಲಿ ಇದ್ದ ಕಾರಣ ಸ್ಥಳದಲ್ಲಿ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದ ತಾಯಿ ಹಾಗೂ ಮತ್ತಿತರರು ಈ ಮಾತುಗಳನ್ನು ಕೇಳಿಸಿಕೊಂಡಿದ್ದರು‌. ಇದರಿಂದಾಗಿ ತೀವ್ರ ಆಘಾತವಾಗಿದೆ, ಮಾತ್ರವಲ್ಲದೆ ಈ ಘಟನೆ ಘಟಿಸಿದ ಕಾರಣ ಮಾನಹಾನಿಯಾಗಿರುತ್ತದೆ ಹಾಗೂ ಮಾನಸಿಕ ಕಿನ್ನತೆಗೆ ಒಳಗಾಗಿರುತ್ತೇನೆ‌. ಹಾಗೂ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ಮಾಲಕಿ ಉಲ್ಲೇಖಿಸಿದ್ದಾರೆ.

ಪ್ರಕರಣ ದಾಖಲಿಸಿದ್ದೇವೆ, ಆರೋಪಿ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ – ಎಸ್.ಪಿ.

ಈ ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಶಿಕೇಶ್ ಸೋನಾವಣೆ ಬೋರ್ವೆಲ್ಸ್ ಸಂಸ್ಥೆಯ ಮಾಲಕಿಯ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿದ್ದೇವೆ, ಆರೋಪಿ ನಿತೇಶ್ ರೈ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

- Advertisement -

Related news

error: Content is protected !!