Monday, May 6, 2024
spot_imgspot_img
spot_imgspot_img

ಮಂಗಳೂರು: ಅಂತಾರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ಬರೆದ ಮಂಗಳೂರಿನ ಚಿಂತನ್ ಎಸ್. ಶೆಟ್ಟಿ

- Advertisement -G L Acharya panikkar
- Advertisement -

ಮಂಗಳೂರು: ದೆಹಲಿಯಲ್ಲಿ ನಡೆದ 67ನೇ ಸ್ಕೂಲ್ ಗೇಮ್ಸ್ ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ನಡೆದ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್-2023-24ರ ಈಜು ಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್‌ನ ಚಿಂತನ್ ಎಸ್. ಶೆಟ್ಟಿ ಅವರು ದಾಖಲೆಯೊಂದಿಗೆ ಚಿನ್ನದ ಪದಕ, ಬೆಳ್ಳಿ ಪದಕ, ಹಾಗೂ ಕಂಚಿನ ಪದಕಗಳನ್ನು ಗೆದ್ದು ಅಪರೂಪದ ಸಾಧನೆಯನ್ನು ಮಾಡಿದ್ದಾರೆ.

ಚಿಂತನ್ ಅವರು 15 – 16 ವರ್ಷದ ಬಾಲಕರ ವಿಭಾಗದಲ್ಲಿ ಸ್ಪರ್ಧಿಸಿ 50 ಮತ್ತು 100 ಮೀಟರ್ ಪ್ರಿಸ್ಟೆಲ್, 50 ಮೀಟರ್ 100 ಮೀಟರ್ ಬಟರ್ ಫ್ಲೈ ಹಾಗೂ 100 ಮೀಟರ್ ವೈಯಕ್ತಿಕ ಮಿಡ್ಲೆ ವಿಭಾಗಗಳಲ್ಲಿ ನೂತನ ಕೂಟ ದಾಖಲೆಯನ್ನು ಬರೆದರು.ಜೊತೆಗೆ 400 ಮೀಟರ್ ವೈಯಕ್ತಿಕ ಮಿಡ್ಲೆ ವಿಭಾಗದಲ್ಲಿ ಬೆಳ್ಳಿ ಪದಕ,ಇನ್ನೂರು ಮೀಟರ್ ಮಿಡ್ಲೆ ರಿಲೆಯಲ್ಲಿ ಕಂಚಿನ ಪದಕಗಳೊಂದಿಗೆ ಈ ವಿಭಾಗದ ವೈಯಕ್ತಿಕ ಚಾಂಪಿಯನ್ಶಿಪ್ ಪಡೆದುಕೊಂಡಿದ್ದಾರೆ.

ಮಂಗಳೂರಿನ ಬಂಟ್ಸ್ ಹಾಸ್ಟೆಲ್ನಲ್ಲಿರುವ ಶ್ರೀ ರಾಮಕೃಷ್ಣ ಫ್ರೌಡ ಶಾಲೆಯ ವಿದ್ಯಾರ್ಥಿಯಾಗಿರುವ ಚಿಂತನ್ ಅವರು, ಮಂಗಳಾ ಸ್ವಿಮ್ಮಿಂಗ್ ಕ್ಲಬ್ಬಿನ ಹಿರಿಯ ಈಜು ತರಬೇತುದಾರರಾದ ಎಂ. ಶಿವಾನಂದ ಗಟ್ಟಿ ಇವರ ಮಾಗದರ್ಶನದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದ ತರಬೇತುದಾರರಾದ ಶಿಶಿರ್ ಎಸ್. ಗಟ್ಟಿ (ಎನ್.ಐ.ಎಸ್.), ಕೀರ್ತನ್ ಎಸ್. ಶೆಟ್ಟಿ. ಚೇತನ್ ಎಸ್. ಶೆಟ್ಟಿ. ರಾಜೇಶ್ ಖಾರ್ವಿ ಬೆಂಗ್ರೆ ಇವರಿಂದ ಮಂಗಳೂರು ಮಹಾನಗರ ಪಾಲಿಕೆ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

- Advertisement -

Related news

error: Content is protected !!