- Advertisement -
- Advertisement -

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೈದ ಪತಿ ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ನಡೆದಿದೆ.
ಮಂಜುನಾಥ್ (32) ಹಾಗೂ ರೋಜಾ (28) ಮೃತರು. ಪತ್ನಿಯನ್ನ ಚಾಕುವಿನಿಂದ ಇರಿದು ಹತ್ಯೆಗೈದು ಪತಿ ಮಂಜುನಾಥ್ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಕನಕಪುರ ಮೂಲದ ಮಂಜುನಾಥ್ ಹಾಗೂ ಮಾವಳ್ಳಿಯ ರೋಜಾಗೆ 4 ವರ್ಷದ ಹಿಂದೆ ವಿವಾಹವಾಗಿತ್ತು, ಆದರೆ ಮಕ್ಕಳಿರಲಿಲ್ಲವಂತೆ. ಪತಿ ಲೇತ್ ಮಿಷನ್ ಕೆಲಸ ಮಾಡುತ್ತಿದ್ದನಂತೆ.

ಭಾನುವಾರ ಮಧ್ಯಾಹ್ನ ಇಬ್ಬರ ನಡುವೆ ಕೌಟುಂಬಿಕ ಕಾರಣಕ್ಕೆ ಜಗಳವಾಗಿತ್ತು. ಸಂಜೆಯಾದರು ಮನೆಯ ಬಾಗಿಲು ಓಪನ್ ಮಾಡದ ಕಾರಣ ಸ್ಥಳೀಯರು ಬಾಗಿಲು ಹೊಡೆದು ನೋಡಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯರೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




- Advertisement -