Tuesday, May 21, 2024
spot_imgspot_img
spot_imgspot_img

ಪಾಕಿಸ್ತಾನಕ್ಕೆ ಆಕಸ್ಮಿಕ ಕ್ಷಿಪಣಿ ಉಡಾವಣೆ ಪ್ರಕರಣ; ವಾಯುಪಡೆಯ ಮೂವರು ಅಧಿಕಾರಿಗಳು ವಜಾ

- Advertisement -G L Acharya panikkar
- Advertisement -

ದೆಹಲಿ: ಈ ವರ್ಷದ ಆರಂಭದಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ಪಾಕಿಸ್ತಾನದ ಮೇಲೆ ಆಕಸ್ಮಿಕವಾಗಿ ಉಡಾಯಿಸಿದ ಭಾರತೀಯ ವಾಯುಪಡೆಯ ಮೂವರು ಅಧಿಕಾರಿಗಳನ್ನು ವಜಾ ಮಾಡಲಾಗಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ. 2022 ಮಾರ್ಚ್ 09ರಂದು ಬ್ರಹ್ಮೋಸ್ ಕ್ಷಿಪಣಿಯನ್ನು ಆಕಸ್ಮಿಕವಾಗಿ ಉಡಾಯಿಸಲಾಗಿದೆ. ಘಟನೆಯ ಜವಾಬ್ದಾರಿಯನ್ನು ನಿಗದಿಪಡಿಸುವುದು ಸೇರಿದಂತೆ ಪ್ರಕರಣದ ಸತ್ಯಗಳನ್ನು ಹೊರತರಲು ಸ್ಥಾಪಿಸಲಾದ ನ್ಯಾಯಾಲಯವು, ಮೂವರು ಅಧಿಕಾರಿಗಳು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ ನಿಂದ ಮಾಡಿದ ವಿಚಲನವು ಕ್ಷಿಪಣಿಯ ಆಕಸ್ಮಿಕ ಉಡಾವಣೆಗೆ ಕಾರಣವಾಯಿತು ಎಂದು ಕಂಡುಹಿಡಿದಿರುವುದಾಗಿ ವಾಯುಪಡೆ ಹೇಳಿಕೆ ತಿಳಿಸಿದೆ. ಈ ಘಟನೆಗೆ ಮೂವರು ಅಧಿಕಾರಿಗಳನ್ನು ಪ್ರಾಥಮಿಕವಾಗಿ ಹೊಣೆಗಾರರನ್ನಾಗಿ ಮಾಡಲಾಗಿದೆ. ಅವರ ಸೇವೆಗಳನ್ನು ಕೇಂದ್ರ ಸರ್ಕಾರ ತಕ್ಷಣವೇ ಜಾರಿಗೆ ಬರುವಂತೆ ಕೊನೆಗೊಳಿಸಿದೆ. 23 ಆಗಸ್ಟ್ 22 ರಂದು ಅಧಿಕಾರಿಗಳನ್ನು ವಜಾಗೊಳಿಸುವ ಆದೇಶವನ್ನು ನೀಡಲಾಗಿದೆ.

ಮಾರ್ಚ್‌ನಲ್ಲಿ ಪಾಕಿಸ್ತಾನದ ಪ್ರದೇಶಕ್ಕೆ ಭಾರತದ ಕಡೆಯಿಂದ ಆಕಸ್ಮಿಕವಾಗಿ ಕ್ಷಿಪಣಿಯನ್ನು ಹಾರಿತ್ತು. ಇದನ್ನು ರಕ್ಷಣಾ ಸಚಿವಾಲಯವು “ತೀವ್ರ ವಿಷಾದನೀಯ” ಎಂದು ಹೇಳಿದ್ದು “ತಾಂತ್ರಿಕ ದೋಷ” ಕಾರಣ ಎಂದಿತ್ತು.

ಪಾಕಿಸ್ತಾನದ ಪ್ರಕಾರ, ಕ್ಷಿಪಣಿಯು ತನ್ನ ವಾಯುಪ್ರದೇಶದೊಳಗೆ 100 ಕಿ.ಮೀ.ಗೂ ಹೆಚ್ಚು ದೂರ, 40,000 ಅಡಿ ಎತ್ತರದಲ್ಲಿ ಹಾರಿದ್ದು, ಬೀಳುವ ಮುನ್ನ ಶಬ್ದದ ಮೂರು ಪಟ್ಟು ವೇಗದಲ್ಲಿ ಹಾರಿತು. ಕ್ಷಿಪಣಿಯಲ್ಲಿ ಯಾವುದೇ ಸಿಡಿತಲೆ ಇರಲಿಲ್ಲ, ಆದ್ದರಿಂದ ಅದು ಸ್ಫೋಟಿಸಲಿಲ್ಲ.

ತನ್ನ ವಾಯುಪ್ರದೇಶದ ಅಪ್ರಚೋದಿತ ಉಲ್ಲಂಘನೆ ಎಂದು ಕರೆದಿರುವುದನ್ನು ಪ್ರತಿಭಟಿಸಲು ಇಸ್ಲಾಮಾಬಾದ್‌ನಲ್ಲಿ ಭಾರತದ ಅಧಿಕಾರಿಗಳನ್ನು ಕರೆಸಲಾಗಿದೆ ಎಂದು ದೇಶದ ವಿದೇಶಾಂಗ ಕಚೇರಿ ತಿಳಿಸಿತ್ತು . ಈ ಘಟನೆಯ ಬಗ್ಗೆ ತನಿಖೆಗೆ ಪಾಕಿಸ್ತಾನವು ಕರೆ ನೀಡಿದ್ದು , ಇದು ಪ್ರಯಾಣಿಕರ ವಿಮಾನ ಮತ್ತು ನಾಗರಿಕರ ಜೀವಕ್ಕೆ ಅಪಾಯವನ್ನುಂಟುಮಾಡುಬಲ್ಲುದಾಗಿತ್ತು ಎಂದು ಹೇಳಿಕೆ ನೀಡಿತ್ತು.

ಇಂತಹ ನಿರ್ಲಕ್ಷ್ಯದ ಅಹಿತಕರ ಪರಿಣಾಮಗಳ ಬಗ್ಗೆ ಎಚ್ಚರದಿಂದಿರಿ ಮತ್ತು ಭವಿಷ್ಯದಲ್ಲಿ ಇಂತಹ ಉಲ್ಲಂಘನೆಗಳು ಮರುಕಳಿಸುವುದನ್ನು ತಪ್ಪಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನವು ಭಾರತಕ್ಕೆ ಎಚ್ಚರಿಕೆ ನೀಡಿತ್ತು.

- Advertisement -

Related news

error: Content is protected !!