Sunday, June 14, 2026
spot_imgspot_img
spot_imgspot_img

ದೆಹಲಿ ಮಹಾನಗರ ಪಾಲಿಕೆ ಚುನಾವಣೆ; ಅಧಿಕಾರದ ಚುಕ್ಕಾಣಿ ಏರಿದ ಆಮ್‌ ಆದ್ಮಿ – 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ

- Advertisement -
- Advertisement -
vtv vitla

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಮೊದಲ ಬಾರಿಗೆ ಆಪ್‌ ಅಧಿಕಾರಕ್ಕೆ ಏರಿದೆ. ಈ ಮೂಲಕ 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯಗೊಂಡಿದೆ.

ಮತ ಎಣಿಕೆಯ ಆರಂಭದಲ್ಲಿ ಬಿಜೆಪಿ ಮತ್ತು ಆಪ್‌ ಮಧ್ಯೆ ನೇರಾನೇರ ಸ್ಪರ್ಧೆ ಇತ್ತು. ಬಳಿಕ ಆಪ್‌ ಮುನ್ನಡೆಯನ್ನು ಕಾಯ್ದುಕೊಂಡಿತು.

ಆಪ್‌ 134, ಬಿಜೆಪಿ 104, ಕಾಂಗ್ರೆಸ್‌ 9, ಇತರರು 3 ವಾರ್ಡ್‌ನಲ್ಲಿ ಜಯಗಳಿಸಿದ್ದಾರೆ. ಆಪ್‌ಗೆ ತೆಕ್ಕೆಗೆ ಅಧಿಕಾರ ಬರುತ್ತಿದ್ದಂತೆ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಆಪ್‌ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದೆ ಭವಿಷ್ಯ ನುಡಿದಿದ್ದವು. ಬಿಜೆಪಿ ಮೂರಂಕಿ ದಾಟುವುದಿಲ್ಲ ಎಂದು ಹೇಳಿದ್ದವು. ಆದರೆ ಆಡಳಿತ ವಿರೋಧಿ ಅಲೆಯ ನಡುವೆಯೂ ಬಿಜೆಪಿ ಆಪ್‌ಗೆ ಪ್ರಬಲ ಸ್ಪರ್ಧೆ ನೀಡಿದೆ.

2007 ರಿಂದ ಬಿಜೆಪಿ ಪಾಲಿಕೆಯ ಅಧಿಕಾರದಲ್ಲಿದೆ. ಡಿಸೆಂಬರ್‌ 4 ರಂದು ಚುನಾವಣೆ ನಡೆದಿದ್ದು, 250 ಸ್ಥಾನಗಳಿರುವ ಪಾಲಿಕೆಯಲ್ಲಿ ಬಹುಮತಕ್ಕೆ 126 ಸ್ಥಾನಗಳ ಅಗತ್ಯವಿದೆ.

- Advertisement -

Related news

error: Content is protected !!