Monday, April 29, 2024
spot_imgspot_img
spot_imgspot_img

ಪಾಕಿಸ್ತಾನಕ್ಕೆ ಸೇನೆಯ ಗೌಪ್ಯ ಮಾಹಿತಿಗಳನ್ನು ಹಂಚುತ್ತಿದ್ದ ಇಬ್ಬರು ಭಾರತೀಯ ಸೇನಾ ಜವಾನರು ಅರೆಸ್ಟ್!

- Advertisement -G L Acharya panikkar
- Advertisement -

ಚಂಡೀಗಢ: ಹಣದ ಆಸೆಗೆ ಪಾಕಿಸ್ತಾನದ ಐಎಸ್‌ಐ ಗೆ ಭಾರತೀಯ ಸೇನೆಯ ಗೌಪ್ಯ ಮಾಹಿತಿಗಳನ್ನು ಹಂಚುತ್ತಿದ್ದ ಇಬ್ಬರು ಸೇನಾ ಜವಾನರನ್ನು ಪತ್ತೆಹಚ್ಚಿ ಬಂಧಿಸಿದ ಪಂಜಾಬ್ ಪೊಲೀಸರು.

ಬಂಧಿತರು ಜಮ್ಮು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಗೆ ನೇಮಕ ಮಾಡಲಾಗಿದ್ದ 19ನೇ ರಾಷ್ಟ್ರೀಯ ರೈಫಲ್ಸ್​​ನ ಸಿಪಾಯಿ ಹರ್​ಪ್ರೀತ್​ ಸಿಂಗ್ ಮತ್ತು ಕಾರ್ಗಿಲ್​​ಗೆ ನೇಮಕ ಮಾಡಲಾಗಿದ್ದ 18 ನೇ ಸಿಖ್ ಲೈಟ್​ ಇನ್​ಫಾಂಟಿಯಾ ಸಿಪಾಯಿ ಗುರ್​​ಬೇಜ್ ಸಿಂಗ್ (23) ಬಂಧಿತ ಸೇನಾ ಸಿಬ್ಬಂದಿಗಳಾಗಿದ್ದಾರೆ.

driving

ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿನಾರ್ ಗುಪ್ತಾ, ಈ ಕುರಿತು ಮಾಹಿತಿ ನೀಡಿದ್ದು, ಇಬ್ಬರು ಆರೋಪಿಗಳು ಈಗಾಗಲೇ ದೇಶದ ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ 900 ಕ್ಕೂ ಹೆಚ್ಚು ದಾಖಲೆಗಳ ಚಿತ್ರಗಳನ್ನು ಗಡಿಯಾಚೆಗಿನ ಮಾದಕವಸ್ತು ಕಳ್ಳ ಸಾಗಣೆದಾರ ರಣವೀರ್ ಸಿಂಗ್ ಎಂಬಾತನೊಂದಿಗೆ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!