Thursday, April 25, 2024
spot_imgspot_img
spot_imgspot_img

ಪಾಕ್ ಯುವತಿಯ ಜೊತೆ ಮದುವೆಯಾಗಿ ಆತ್ಮಾಹುತಿ ದಾಳಿ ನಡೆಸಿದ ಕೇರಳದ M.Tech ವಿದ್ಯಾರ್ಥಿ

- Advertisement -G L Acharya panikkar
- Advertisement -
vtv vitla
vtv vitla

ತಿರುವನಂತಪುರಂ: ಇಸ್ಲಾಮಿಕ್​ ಸ್ಟೇಟ್​ ಉಗ್ರ ಸಂಘಟನೆ ಸೇರಲು ಕೇರಳದಿಂದ ಅಫ್ಘಾನಿಸ್ತಾನಕ್ಕೆ ತೆರಳಿದ ಎಂಟೆಕ್​ ವಿದ್ಯಾರ್ಥಿ ಆತ್ಮಾಹುತಿ ದಾಳಿದಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ಯುವಕನನ್ನು 23 ವರ್ಷದ ನಜೀಬ್​ ಅಲ್​ ಹಿಂಡಿ ಎಂದು ಗುರುತಿಸಲಾಗಿದೆ.

ಪಾಕಿಸ್ತಾನಿ ಯುವತಿಯನ್ನು ಮದುವೆಯಾಗಿದ್ದಾನೆ. ಅದೇ ದಿನ ರಾತ್ರಿ ಆತ್ಮಾಹುತಿ ದಾಳಿ ನಡೆದಿದೆ. ಇಸ್ಲಾಮಿಕ್​ ಸ್ಟೇಟ್​ ಉಗ್ರ ಸಂಘಟನೆ ಸೇರಲು ಕೇರಳದಿಂದ ಅಫ್ಘಾನಿಸ್ತಾನಕ್ಕೆ ತೆರಳಿದ್ದ ಎಂದು ಇಸ್ಲಾಮಿಕ್ ಸ್ಟೇಟ್-ಖೊರಾಸಾನ್ ಪ್ರಾಂತ್ಯ (ಐಎಸ್​ಕೆಪಿ)ದ ಮುಖವಾಣಿ ವಾಯ್ಸ್ ಆಫ್ ಖುರಾಸನ್ ತಿಳಿಸಿದೆ.

ವಾಯ್ಸ್ ಆಫ್ ಖುರಾಸನ್ ಪ್ರಕಟಿಸಿರುವ ಸುದ್ದಿಯಲ್ಲಿ ನಜೀಬ್​ ಯಾವಾಗ ಮೃತಪಟ್ಟ ಮತ್ತು ಅವನ ಸಾವಿನ ಸುತ್ತಲಿನ ಸಂದರ್ಭಗಳನ್ನು ಸಹ ನಮೂದಿಸಿಲ್ಲ. ಐಎಸ್​ಕೆಪಿ ಇರುವ ಅಫ್ಘಾನಿಸ್ತಾನದ ಖೊರಾಸಾನ್‌ ಸೇರಲು ಭಾರತದ ಬಹುತೇಕದ ಮಾರ್ಗಗಳಲ್ಲಿ ನಜೀಬ್ ಪ್ರಯಾಣಿಸಿದ್ದನು ಎಂದು ತಿಳಿದುಬಂದಿದೆ. ನಜೀಬ್​ನನ್ನು ಕೊಂಡಾಡಿರುವ ಐಎಸ್​ಕೆಪಿ, ನಜೀಬ್​ ಎಷ್ಟೇ ತೊಂದರೆಗಳನ್ನು ಎದುರಿಸಿದರೂ ಐಎಸ್​ಕೆಪಿ ಹೋರಾಟಗಾರನಾಗಿ ತನ್ನ ಜಿಹಾದ್ ಅನ್ನು ಮುಂದುವರಿಸಿದ್ದನು ಎಂದು ಶ್ಲಾಘಿಸಿದೆ.

- Advertisement -

Related news

error: Content is protected !!