
ಕೆದಿಲ ಗ್ರಾಮ ಪಂಚಾಯತ್ ಹಾಗು ನೆಟ್ಲ ಮೂಡ್ನೂರ್ ಗ್ರಾಮ ಪಂಚಾಯತ್ ಗೆ ಒಳಪಟ್ಟ ಕುಕ್ಕರೆಬೆಟ್ಟು ಪಾಟ್ರಕೊಡಿಯ ಹದಗೆಟ್ಟ ರಸ್ತೆಯ ಕಾಮಗಾರಿಯನ್ನು ಮಾಡುವಂತೆ ಸರಕಾರಕ್ಕೆ ಆಗ್ರಹ ಸಲ್ಲಿಸುವ ಸಲುವಾಗಿ ಪಾಟ್ರಕೊಡಿ ಹಾಗು ಅಸುಪಾಸಿನ ಗ್ರಾಮಸ್ಥರು ಶ್ರಿಪಾದ್ ವಸಂತ ಭಟ್ ರವರ ಅಧ್ಯಕ್ಷ ತೆಯಲ್ಲಿ ಸಭೆ ಸೇರಿ ಪಾಟ್ರಕೊಡಿ ಕುಕ್ಕರೆಬೆಟ್ಟು ರಸ್ತೆಯ ನವ ನಿರ್ಮಾಣ ಸಮಿತಿ ಎಂಬ ಸಂಘಟನೆಯನ್ನು ಸಂಘಟಿಸಿದರು.
ಈ ಸಭೆಯಲ್ಲಿ ಪಾಟ್ರಕೊಡಿಯ ಪ್ರಮುಖರಾದ ಪರಮೇಶ್ವರ ನಾವುಡ, ಮಹಮ್ಮದ್ ಮಾಸ್ತರ್, ಹಮೀದ್ ಹಾಜಿ , ರೊರ್ಬಟ್ ಲಸ್ರದೊ, ಪ್ರವೀಣ್ ಚಂದ್ರ, ಶೆಟ್ಟಿ, ಹರೀಶ್ ಕುದುಂಬ್ಲಾಡಿ, ವಿಶ್ವನಾಥ್ ಶೆಟ್ಟಿ, ಮೂಸಲ್ ಪೈಝಿ, ಹಾಗೂ ಹಲವಾರು ಗ್ರಾಮಾಸ್ಥರು ಯುವಕರು ಭಾಗವಹಿಸಿದರು.

ಈ ಸಭೆಯಲ್ಲಿ ಹದಗೆಟ್ಟ ರಸ್ತೆಯ ನವ ನಿರ್ಮಾಣದ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಯಿತು. ಸಂಬಂಧಿಸಿದ ಜನಪ್ರತಿನಿಧಿಗಳನ್ನು ಬೇಟಿಯಾಗಿ ರಸ್ತೆಯ ನವ ನಿರ್ಮಾಣದ ಬಗ್ಗೆ ಅಪೇಕ್ಷಿಸುವುದಾಗಿ ತೀರ್ಮಾನಿಸಲಾಯಿತು ಮತ್ತು ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿಗೆ 14 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು ಅಧ್ಯಕ್ಷರಾಗಿ ಶ್ರಿಪಾದ್ ವಸಂತ ಭಟ್ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಪರಮೇಶ್ವರ ನಾವುಡ, ಮಹಮ್ಮದ್ ಮಾಸ್ಟರ್, ಹಮೀದ್ ಹಾಜಿ, ಪಾಟ್ರಕೊಡಿ, ರಾರ್ಬಟ್ ಲಸ್ರದೊ, ಪ್ರವೀಣ್ ಚಂದ್ರ ಶೆಟ್ಟಿ,ಹಬೀಬ್ ಮುಹ್ಸಿನ್ ಎಂ ಹೆಚ್ಹರೀಶ್ ಕುದುಂಬ್ಲಾಡಿ, ವಿಶ್ವನಾಥ್ ಶೆಟ್ಟಿ, ಇಬ್ರಾಹಿಂ ಮಿತ್ತಪಡ್ಪು, ಸಂಕಪ್ಪ, ಚಂದ್ರಶೇಖರ, ಅಝೀಮ್ ಪಾಟ್ರಕೊಡಿ, ಹನೀಪ್ ಸಂಕದಬಳಿ ಮಾದ್ಯಮ ವಕ್ತಾರ ಅಬ್ದುಲ್ ಖಾದರ್ ಪಾಟ್ರಕೊಡಿರವರನ್ನು ಆರಿಸಲಾಯಿತು,
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಹಬೀಬ್ ಮುಹ್ಸಿನ್ ಎಂ.ಹೆಚ್ ರವರು ಸ್ವಾಗತಿಸಿ, ಅಬ್ದುಲ್ ಖಾದರ್ ಪಾಟ್ರಕೊಡಿ ಅಭಿನಂದಿಸಿದರು.



