Friday, March 29, 2024
spot_imgspot_img
spot_imgspot_img

ಹಿಂದು ಜಾಗರಣಾ ವೇದಿಕೆ ಪುತ್ತೂರು ಇದರ ವತಿಯಿಂದ ದೌರ್ಜನ್ಯ, ಅತ್ಯಾಚಾರ ಪ್ರಕರಣ ಮತ್ತು ಲವಜಿಹಾದ್ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ

- Advertisement -G L Acharya panikkar
- Advertisement -

ಪುತ್ತೂರು: ಹಿಂದು ಜಾಗರಣಾ ವೇದಿಕೆ ಪುತ್ತೂರು ತಾಲ್ಲೂಕು ಇದರ ವತಿಯಿಂದ ಅಕ್ಟೋಬರ್ 07 ರಂದು ಸಂಜೆ ಪುತ್ತೂರಿನ ಅಮರ ಜವಾನ್ ಜ್ಯೋತಿ ವೃತ್ತ ಬಳಿ ದೇಶದಾದ್ಯಂತ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣ ಮತ್ತು ಲವಜಿಹಾದ್ ಪ್ರಕರಣವನ್ನು ಖಂಡಿಸಿ ಇದರ ಆರೋಪಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿ ಶಿಕ್ಷೆ ನೀಡುವಂತೆ ಒತ್ತಾಯಿಸಿ. ಲವ್ ಜಿಹಾದ್ ನ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ನಡೆಸಿದರು.


ಪ್ರತಿಭಟನೆಯನ್ನು ಉದ್ದೇಶಿಸಿ ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗ ಮಾತೃ ಸಂಯೋಜಕ ಗಣರಾಜ್ ಭಟ್ ಕೆದಿಲ ಇವರು ಮಾತನಾಡಿದರು. ಸ್ವಾತಂತ್ರ ಪೂರ್ವದಲ್ಲಿ ದೇಶ ವಿಭಜನೆಯಾದಾಗ ಪಾಕಿಸ್ಥಾನದ ಸಂಸ್ಥಾಪಕ ಮುಹಮ್ಮದ್ ಆಲಿ ಜಿನ್ನಾ ಭಾರತ ದೇಶ ನಮ್ಮದಾಗಬೇಕು ಎಂಬ ಕಲ್ಪನೆಯ ಕೂಗು ಇಂದು ಹಲವು ರೀತಿಯ ಜಿಹಾದ್‌ಗಳ ಮೂಲಕ ಆತನ ಕನಸನ್ನು ನನಸು ಮಾಡುವ ದಂಧೆ ನಡೆಯುತ್ತಿದೆ ಆತಂಕ ವ್ಯಕ್ತಪಡಿಸಿದರು.

ಹಿಂದು ಯುವತಿಯರನ್ನು ಪ್ರೀತಿಯ ನಾಟಕವಾಡಿ ದಾರಿ ತಪ್ಪಿಸುವ ಅತೀ ದೊಡ್ಡ ಷಡ್ಯಂತ್ರವಾಗಿದೆ. ಬಲಾತ್ಕಾರವಾಗಿ ಮತಾಂತರ ನಡೆಸಿ ಮದುವೆಯಾದ ನಂತರ ಅವರನ್ನು ಹೆರವು ಯಂತ್ರಗಳಾಗಿ ಮಾರ್ಪಾಡು ಮಾಡುತ್ತಾರೆ. ಬಸ್ ಕಂಡೆಕ್ಟರ್, ರಿಕ್ಷಾ ಚಾಲಕ, ಮೊಬೈಲ್ ಅಂಗಡಿಗಳಲ್ಲಿ ನಾನಾ ರೀತಿಯಲ್ಲಿ ಯುವತಿಯನ್ನು ತಮ್ಮ ಬಲೆಗೆ ಬೀಳಿಸುವ ಕೆಲಸಗಳು ನಡೆಯುತ್ತಿದೆ. ಇದರ ಬಗ್ಗೆ ಜಾಗೃತಿ ಪ್ರತಿಯೊಬ್ಬರ ಮನೆ ಮನೆಗಳಲ್ಲಿಯೂ ಜಾಗೃತಿಯಾಗಬೇಕು ಎಂದು ಹೇಳಿದ ಅವರು ಹಿಂದು ಜಾಗರಣಾ ವೇದಿಕೆ ಸ್ವಾರ್ಥಕ್ಕಾಗಿ ದುಡಿಯುತ್ತಿಲ್ಲ. ಹಿಂದೂ ಸಮಾಜದ ಜಾಗೃತಿ, ರಕ್ಷಣೆಗಾಗಿ ಸದಾ ಸಿದ್ದವಾಗಿದೆ. ಕಾನೂನುಗಳಿಗೆ ಒಳಪಟ್ಟುಕೊಂಡು ಜಾಗರಣಾ ವೇದಿಕೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಪುತ್ತೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಅತ್ಯಾಚಾರ, ಲವ್ ಜಿಹಾದ್‌ಗಳ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಅವುಗಳನ್ನು ತನಿಖೆ ನಡೆಸಿ ಸೂಕ್ತ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಸಾಂಕೇತಿವಾಗಿ ಪ್ರತಿಭಟನೆ ನಡೆಸಿದೆ. ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಗಳನ್ನು ನಡೆಸಲಿದೆ. ಸರಕಾರ ಯಾವುದೇ ರಾಜಕೀಯ ನಡೆದೆ ಎಲ್ಲಾ ಪ್ರಕರಣಗಳನ್ನು ತನಿಖೆ ನಡೆಸಿ ಸೂಕ್ತ ಶಿಕ್ಷೆ ನಿಡುವಂತೆ ಅವರು ಆಗ್ರಹಿಸಿದರು.

ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಉಪಾಧ್ಯಕ್ಷ ವೆಂಕಟ್ರಮಣ, ಜಿಲ್ಲಾ ಮಾತೃ ಸುರಕ್ಷಾ ಸಂಯೋಜಕ ರಾಕೇಶ್ ಪಂಚೋಡಿ, ಕಡಬ ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರ, ಉಪಾಧ್ಯಕ್ಷ ಶಶಿಕಾಂತ ಕೋರ್ಟ್‌ರಸ್ತೆ, ಸಂಪರ್ಕ ಪ್ರಮುಖ್ ದಿನೇಶ್ ಪಂಜಿಗ, ನಗರ ಪ್ರಧಾನ ಕಾರ್ಯದರ್ಶಿ ರಾಕೇಶ್ , ಪ್ರಮುಖರಾದ ಪವಿತ್ರ ರೈ ಬಾಳಿಲ, ಸ್ವಸ್ತಿಕ್ ಮೇಗಿನಗುತ್ತು, ಗೀತೇಶ್, ಪುಷ್ಪರಾಜ್ ಸವಣೂರು, ಪ್ರವೀಣ್ ಬಂಬಿಲ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪುತ್ತೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ ರೈ ಸ್ವಾಗತಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರಕಟ್ಟೆ ವಂದಿಸಿದರು.

- Advertisement -

Related news

error: Content is protected !!