Monday, May 13, 2024
spot_imgspot_img
spot_imgspot_img

ಪಾಲ್ತಾಡಿ: ದ.ಕ.ಜಿ.ಪಂ.ಸ.ಹಿ.ಪ್ರಾ. ಶಾಲೆಯಲ್ಲಿ ವಿಜೃಂಭಣೆಯಿಂದ ನಡೆದ ಶಾಲಾ ವಾರ್ಷಿಕೋತ್ಸವ

- Advertisement -G L Acharya panikkar
- Advertisement -
vtv vitla

ಸಭೆ-ಸಮಾರೋಪ, ಸಾಂಸ್ಕೃತಿಕ, ಸನ್ಮಾನ, ಗುರುವಂದನೆ, ಬಹುಮಾನ ವಿತರಣೆ ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲ್ತಾಡಿಯಲ್ಲಿ ಶಾಲಾ ವಾರ್ಷಿಕೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ಜಯರಾಮ ಗೌಡ ದೊಡ್ಡಮನೆ ಅಧ್ಯಕ್ಷರು, ಎಸ್‌ಡಿಎಂಸಿ ಪಾಲ್ತಾಡಿ ಧ್ವಜಾರೋಹಣ ನೆರವೇರಿಸಿ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು.

ರಾಜೀವಿ ವಿ.ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಸವಣೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶೀನಪ್ಪ ಶೆಟ್ಟಿ ನೆಕ್ರಾಜೆ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಸವಣೂರು, ಗಿರಿಶಂಕರ ಸುಲಾಯ ಸದಸ್ಯರು ಗ್ರಾಮ ಪಂಚಾಯತ್ ಸವಣೂರು, ಸತೀಶ್ ಅಂಗಡಿಮೂಲೆ ಸದಸ್ಯರು ಗ್ರಾಮ ಪಂಚಾಯತ್ ಸವಣೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಮಕ್ಕಳಿಗೆ ಹಾಗೂ ಹಳೆವಿದ್ಯಾರ್ಥಿಗಳಿಗೆ ಏರ್ಪಡಿಸಿದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಭರತ್ ವೈ ಅಲ್ಯಾಡಿ, ತಾರನಾಥ ಬೊಳಿಯಾಲ, ಹರೀಶ್ ಕಾಯರ್‌ಗುರಿ, ಚೇತನಾ, ಸುಂದರ ಗೌಡ ತಾ| ದೈ. ಶಿ ಪರಿವೀಕ್ಷಕ, ನವೀನ್ ವೇಗಸ್ ಸಮನ್ವಯಾಧಿಕಾರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ವಿಷ್ಣುಪ್ರಸಾದ್ ಸಹಾಯಕ ನಿರ್ದೇಶಕ ಅಕ್ಷರದಾಸೋಹ ತಾ.ಪಂ ಪುತ್ತೂರು, ಅಮೃತಕಲಾ ಶಿಕ್ಷಣ ಸಂಯೋಜಕರು ಪುತ್ತೂರು, ನಿರಂಜನ್ ಸಮೂಹ ಸಂಪನ್ಮೂಲ ವ್ಯಕ್ತಿ ಕೆಯ್ಯೂರು ಕ್ಲಸ್ಟರ್, ಶ್ರೀಧರ ಗೌಡ ಅಂಗಡಿಹಿತ್ಲು ನಿರ್ದೇಶಕರು ವ್ಯ. ಸೇ. ಸ. ಬ್ಯಾಂಕ್ ಕೊಳ್ತಿಗೆ, ಗುರುಕಿರಣ್ ಬೊಳಿಯಾಲ ಅಧ್ಯಕ್ಷರು ಉಳ್ಳಾಕುಲು ಫ್ರೆಂಡ್ಸ್ಕ್ಲಬ್ ಪಾಲ್ತಾಡಿ, ಉದಯ ಗೌಡ ಅಧ್ಯಕ್ಷರು ಶ್ರೀ. ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಪಾಲ್ತಾಡಿ, ಮೋಹಿನಿ ಪಾಲ್ತಾಡಿ ಅಧ್ಯಕ್ಷರು ನವೋದಯ ಒಕ್ಕೂಟ ಪಾಲ್ತಾಡಿ ಉಪಸ್ಥಿತರಿದ್ದರು. ಬಳಿಕ ಅನ್ನಸಂತರ್ಪಣೆ ನಡೆಯಿತು.

ಬಳಿಕ ಪಾಲ್ತಾಡಿ ಮತ್ತು ಉಪ್ಪೊಳಿಗೆ ಅಂಗನವಾಡಿ ಕೇಂದ್ರ ಹಾಗೂ ಪಾಲ್ತಾಡಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಈ ಸಂದರ್ಭದಲ್ಲಿ ರಂಗ ಚಕ್ರವರ್ತಿ ಸುಬ್ಬು ಸಂಟ್ಯಾರ್ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ಸುದರ್ಶನೋಪಖ್ಯಾನ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು.

ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಗಿರೀಶ್ ನಂದನ್ ಕೆ.ಎ.ಎಸ್ ಸಹಾಯಕ ಆಯುಕ್ತರು ಪುತ್ತೂರು ಉಪವಿಭಾಗ ಹಾಗೂ ನಿವೃತ್ತ ಮುಖ್ಯಗುರು ಈಶ್ವರ ಭಟ್ ಎಲ್ಯಡ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಗಿರೀಶ್ ನಂದನ್ ಕೆ.ಎ.ಎಸ್ ಪಾಲ್ತಾಡಿ ಪ್ರಾಥಮಿಕ ಶಾಲೆಯ ಬಗ್ಗೆ, ಶಾಲಾ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸರಕಾರದಿಂದ ಶಾಲೆಗೆ ಬೇಕಾಗುವ ಸವಲತ್ತುಗಳನ್ನು ಒದಿಸುವಲ್ಲಿ ಶ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಮುಖ್ಯ ಭಾಷಣಕಾರರಾಗಿ ಉಪಸ್ಥಿತರಿದ್ದ ಖ್ಯಾತ ಚಿಂತಕ ಅರವಿಂದ ಚೊಕ್ಕಾಡಿ ಮಾತನಾಡಿ ಸರಕಾರಿ ಶಾಲೆಯಿಂದ ಆಗುವ ಪ್ರಯೋಜನ, ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಿಗುವ ಸೌಲಭ್ಯಗಳ ಬಗ್ಗೆ, ಹಾಗೂ ಪಾಲ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾರ್ಯಗಳು, ಮಕ್ಕಳಿಗೆ ನೀಡುವ ಶಿಕ್ಷಣ, ಶಾಲಾ ಅಚ್ಚುಕಟ್ಟಾದ ಶಿಕ್ಷಣ ನೀತಿ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಚನಿಲ ತಿಮ್ಮಪ್ಪ ಶೆಟ್ಟಿ, ಅಧ್ಯಕ್ಷರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು, ಲೋಕೇಶ್ ಎಸ್ ಆರ್ ಕ್ಷೇತ್ರ ಶಿಕ್ಷಣಾಧಿಕಾರಿ ಶಾ.ಶಿ ಮತ್ತು ಸಾ.ಇ ಪುತ್ತೂರು, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಲ. ಸಂತೋಷ್ ಕುಮಾರ್ ನಳೀಲು ಆಡಳಿತ ಮೊಕ್ತೇಸರರು ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸಂಜೀವ ಗೌಡ ಪಾರ್ಲ ನಿವೃತ್ತ ಸೇನಾಧಿಕಾರಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಯ ಮಾಜಿ ಸಹಶಿಕ್ಷಕರನ್ನು ಗೌರವಿಸಿ ಗುರುವಂದನೆ ನೀಡಲಾಯಿತು. ಶೈಕ್ಷಣಿಕ ವರ್ಷದಲ್ಲಿ ಅತೀ ಹೆಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಲಾ ಹಳೆವಿದ್ಯಾರ್ಥಿ ಚಿನ್ನದ ಪದಕ ವಿಜೇತ ಸಂಪ್ಯ ಪೊಲೀಸ್ ಠಾಣಾ ಹೆಡ್‌ಕಾನ್‌ಸ್ಟೇಬಲ್ ಪ್ರವೀಣ್ ರೈ ನಡುಕೂಟೇಲು, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್, ನಿವೃತ್ತ ಅಂಗನವಾಡಿ ಶಿಕ್ಷಕಿ ಸುನಂದಾ, ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ, ತುಳುನಾಡ ಕಲಾ ಸೌರಭ ಪ್ರಕಾಶ್ ಕೆ. ತುಮಿನಾಡು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಹಾಗೂ ಶಾಲಾ ಅಭಿವೃದ್ಧಿಗೆ ಸಹಕರಿಸಿದ ದಾನಿಗಳಿಗೆ ಹಾಗೂ ಮಾಜಿ ಎಸ್‌ಡಿಎಂಸಿ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.

ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ರೈ ನಡುಕೋಲು ಸ್ವಾಗತಿಸಿ, ಡಾ. ಕೃಷ್ಣ ಪ್ರಸಾದ್ ಪಾರ್ಲ ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘ ಪಾಲ್ತಾಡಿ ವಂದಿಸಿದರು. ಬಾಲಕೃಷ್ಣ ಪೊರ್ದಾಳ್ ದೈ.ಶಿ.ಶಿ. ಬೆಥನಿ ಆಂಗ್ಲಮಾಧ್ಯಮ ಶಾಲೆ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಸೇರಿದಂತೆ ಸಾವಿರಾರು ಊರ-ಪರವೂರ ಶಾಲಾಭಿಮಾನಿಗಳು ಭಾಗವಹಿಸಿದ್ದರು.

- Advertisement -

Related news

error: Content is protected !!