Tuesday, May 21, 2024
spot_imgspot_img
spot_imgspot_img

ಪಿಎಫ್‌ಐ, ಎಸ್‌ಡಿಪಿಐ ಬ್ಯಾನ್ ಗೆ ಕಾಂಗ್ರೆಸ್ ಕರೆ ನೀಡಿದ್ದಲ್ಲಿ ನಾವು ಅವರ ಅಭಿಪ್ರಾಯದೊಂದಿಗೆ ಜೊತೆಗೂಡುತ್ತೇವೆ; ವಿಹಿಂಪ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ

- Advertisement -G L Acharya panikkar
- Advertisement -

ಪಿಎಫ್‌ಐ, ಎಸ್‌ಡಿಪಿಐ (SDPI) ಬ್ಯಾನ್‌ಗೆ ಕಾಂಗ್ರೆಸ್ ಕರೆ ನೀಡಿದ್ದಲ್ಲಿ ನೂರಕ್ಕೆ ನೂರು ಪ್ರತಿಶತ ಅವರ ಅಭಿಪ್ರಾಯದೊಂದಿಗೆ ಜೊತೆಗೂಡುತ್ತೇವೆ. ರಾಷ್ಟ್ರ ವಿರೋಧಿಗಳ ವಿರುದ್ಧ ಯಾರು ಹೋರಾಡುತ್ತಾರೋ ಅವರೊಂದಿಗೆ ನಾವು ಕೈಜೋಡಿಸುತ್ತೇವೆ. ಮುಸ್ಲಿಂ ಸಂಘಟನೆ ಈ ಬಗ್ಗೆ ಕರೆ ನೀಡಿದರೂ ನಾವು ಸಹಮತ ಸೂಚಿಸುತ್ತೇವೆ ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಸಾವರ್ಕರ್ ಫೋಟೋ ಅಳವಡಿಕೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಮಂಗಳೂರಿನ ಗುರುಪುರದಲ್ಲಿ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ರಾದ್ಧಾಂತ ಸೃಷ್ಟಿ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ತಕ್ಷಣ ಬಿಜೆಪಿ ಸರಕಾರ ಎರಡೂ ಸಂಘಟನೆಗಳನ್ನು ತಕ್ಷಣ ಬ್ಯಾನ್ ಮಾಡಬೇಕು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಾವರ್ಕರ್ ಬಗ್ಗೆ ಇನ್ನಷ್ಟು ವಿಚಾರಗಳನ್ನು ಹಂಚುವ ಮೂಲಕ ಅಭಿಯಾನ ಕೈಗೊಳ್ಳಲಾಗುತ್ತದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂಘಟನೆಗಳನ್ನು ನಿಷೇಧ ಮಾಡದಿದ್ದಲ್ಲಿ ಸಮಾಜ ಬಹಳ ದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ. ಬಿಜೆಪಿ ರಾಜಕೀಯ ಲಾಭಕ್ಕಾಗಿ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡುತ್ತಿಲ್ಲ ಎಂಬುದನ್ನು ನಾವು ಒಪ್ಪೋದಿಲ್ಲ. ಬಿಜೆಪಿ ರಾಷ್ಟ್ರೀಯವಾದಿ ಪಕ್ಷ. ಖಂಡಿತಾ ಆ ಮಟ್ಟಕ್ಕೆ ಅದು ಇಳಿಯಲಿಕ್ಕಿಲ್ಲ ಎಂಬ ವಿಶ್ವಾಸವಿದೆ. ಈ ವಿಚಾರಗಳಲ್ಲಿ ಬಿಜೆಪಿಯೊಂದಿಗೆ ನಮ್ಮಭಿನ್ನತೆಯಿದೆ. ದೇಶವಿರೋಧಿ ಸಂಘಟನೆಗಳ ಬ್ಯಾನ್ ವಿಚಾರದಲ್ಲಿ ಬಿಜೆಪಿ ನಮ್ಮ ಪಕ್ಷ ಎಂದು ನಾವು ಅದಕ್ಕೆ ಬೆಂಬಲ ನೀಡುವುದಿಲ್ಲ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಸುರತ್ಕಲ್ ಫಾಝಿಲ್ ಹತ್ಯೆಯನ್ನು ನಾವು ಸಮರ್ಥನೆ ಮಾಡೋದಿಲ್ಲ. ಆದರೆ ದ.ಕ.ಜಿಲ್ಲೆಯಲ್ಲಿ ನಿರಂತರವಾಗಿ ಹಿಂದೂಗಳ ಹತ್ಯೆಯಾಗುತ್ತಿದೆ. ಇದರಿಂದ ಹಿಂದೂ ಯುವಕರಲ್ಲಿ ಆಕ್ರೋಶ ನಿರ್ಮಾಣವಾಗಿದೆ. ಯಾವುದೇ ಕೃತ್ಯದಲ್ಲಿ ಗುರುತಿಸಿಕೊಳ್ಳದ ಪ್ರವೀಣ್ ನೆಟ್ಟಾರು ಹತ್ಯೆಯಾಗಿದೆ. ಅದರ ಪ್ರತಿಫಲ ಸುರತ್ಕಲ್ ಫಾಝಿಲ್ ಕೊಲೆಯಲ್ಲಿ ಕೊನೆಗೊಂಡಿದೆ. ಹತ್ಯೆಯನ್ನು ನಾವು ಸಮರ್ಥಿಸೋದಿಲ್ಲ. ಆದರೆ ಹಿಂದೂ ಸಮಾಜ ಎಂದೂ ಕೈಕಟ್ಟಿ ಕೂರೋದಿಲ್ಲ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.

- Advertisement -

Related news

error: Content is protected !!